- Advertisement -
- Advertisement -



ಪುತ್ತೂರು: ಜೆಸಿಐ ಪುತ್ತೂರು ಘಟಕದ 2027ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೆಸಿ ಪದ್ಮಪ್ರಸಾದ್ ಜೈನ್ ಹಾಗೂ ಕಾರ್ಯದರ್ಶಿಯಾಗಿ ಜೆಸಿ ವಿರೂಪಾಕ್ಷ ಭಟ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದಾಗಿ ತಿಳಿದುಬಂದಿದೆ.
ನ.26ರಂದು ನಡೆದ ಘಟಕದ ಸಭೆಯಲ್ಲಿ ಪೂರ್ವಾಧ್ಯಕ್ಷರು ಹಾಗೂ ಜೆಸಿ ಸದಸ್ಯರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಸರ್ವಸದಸ್ಯರ ಒಮ್ಮತದ ಮೇರೆಗೆ ಪ್ರಮುಖ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ನಿರ್ಣಯವನ್ನು ಹಾಗೂ ಉಳಿದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಮುಂದೆ ಮಾಡುವುದಾಗಿ ತಿರ್ಮಾನಿಸಲಾಯಿತು.
ಜೆಸಿ ಪದ್ಮಪ್ರಸಾದ್ ಜೈನ್ ಅವರು ಪುತ್ತೂರಿನ ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಯಲ್ಲಿ ಎಂಜಿನಿಯರಿಂಗ್ ವಿಭಾಗದ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
- Advertisement -








