Tuesday, August 25, 2026
spot_imgspot_img
spot_imgspot_img

ಕಡೇಶ್ವಾಲ್ಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ನೂತನ ಗರ್ಭಗುಡಿಯ ಪಾದುಕಾನ್ಯಾಸ

- Advertisement -
- Advertisement -

ಬಂಟ್ವಾಳ: ಕಡೇಶ್ವಾಲ್ಯ, ಮೊಗರ್ನಾಡು ಸಾವಿರ ಸೀಮೆಯಲ್ಲಿರುವ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಆ. 26 ಬುಧವಾರ ಬೆಳಿಗ್ಗೆ 10.30 ಗಂಟೆಗೆ ನೂತನ ಗರ್ಭಗುಡಿಯ ಪಾದುಕಾನ್ಯಾಸ ನಡೆಯಲಿದೆ.

ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಂತ್ರಿಗಳ ಪೌರೋಹಿತ್ಯದಲ್ಲಿ, ವಾಸ್ತು ತಜ್ಞರಾದ ಶ್ರೀ ಕೃಷ್ಣರಾಜ ತಂತ್ರಿಗಳು ಹಾಗೂ ದೇವಸ್ಥಾನದ ಅರ್ಚಕ ವೃಂದದವರ ಉಪಸ್ಥಿತಿಯಲ್ಲಿ, ಮಂಗಳೂರು ಗಣೇಶ್ ಬೀಡಿ ಮಾಲಕರಾದ ಎಂ. ಜಗನ್ನಾಥ ಶೆಣೈ, ಮೈಸೂರು ಇವರು ನೂತನ ಗರ್ಭಗುಡಿಯ ಪಾದುಕಾನ್ಯಾಸ ನೆರವೇರಿಸಲಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ಸರ್ವ ಭಕ್ತಾದಿಗಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!