Tuesday, June 16, 2026
spot_imgspot_img
spot_imgspot_img

ಪಾಕಿಸ್ತಾನದಲ್ಲಿ ಟಿಕ್‌ಟಾಕ್‌ ಬ್ಯಾನ್!!!

- Advertisement -
- Advertisement -

ಇಸ್ಲಾಮಾಬಾದ್ : ಚೀನಾದ ಟಿಕ್‌ಟಾಕ್‌ ಆ್ಯಪ್‌ ನಿರ್ಬಂಧಿಸಿರುವುದಾಗಿ ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.

ಟಿಕ್‌ಟಾಕ್‌ನಲ್ಲಿ ಅಸಭ್ಯವಾದ ವಿಡಿಯೊಗಳು ಇರುವುದಾಗಿ ಬಂದಿರುವ ದೂರುಗಳ ಆಧಾರದ ಮೇಲೆ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಟಿಕ್‌ಟಾಕ್‌ ಅಪ್ಲಿಕೇಷನ್‌ ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಾನೂನು ಬಾಹಿರವಾದ, ಅಶ್ಲೀಲ ದೃಶ್ಯಗಳನ್ನು ಒಳಗೊಂಡಿರುವ ವಿಷಯಗಳನ್ನು ನಿಯಂತ್ರಿಸಲು ಪರಿಣಾಮಕಾರಿಯಾದ ವ್ಯವಸ್ಥೆ ಅಭಿವೃದ್ಧಿ ಪಡಿಸುವಂತೆ ನೀಡಲಾಗಿದ್ದ ಸೂಚನೆಯನ್ನು ಪಾಲಿಸುವಲ್ಲಿ ಕಂಪನಿ ವಿಫಲವಾಗಿರುವ ಕಾರಣ ಟಿಕ್‌ಟಾಕ್‌ ಆ್ಯಪ್‌ ನಿರ್ಬಂಧಿಸಲು ಸೂಚಿಸಲಾಗಿದೆ ಎಂದು ಹೇಳಿದೆ.

- Advertisement -

Related news

error: Content is protected !!