Tuesday, April 20, 2021
spot_imgspot_img
spot_imgspot_img

ಹಿಂದೂ ಕುಟುಂಬದ ಐವರು ಸದಸ್ಯರನ್ನು ಕತ್ತು ಸೀಳಿ ದಾರುಣ ಹತ್ಯೆ!

ಇಸ್ಲಮಾಬಾದ್: ಹಿಂದೂ ಕುಟುಂಬವೊಂದರ ಐವರು ಸದಸ್ಯರನ್ನು ಕತ್ತು ಸೀಳಿ ಕೊಲೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಾಕ್​ ನಗರ ರಹೀಮ್​ ಯಾರ್​ ಖಾನ್​ನಿಂದ 15 ಕಿ.ಮೀ ದೂರವಿರುವ ಅಬುದಾಬಿ ಕಾಲನಿಯಲ್ಲಿನ ನಿವಾಸದಲ್ಲಿ ಐವರ ಮೃತದೇಹ ಪತ್ತೆಯಾಗಿದೆ ಎಂದು ದಿ ನ್ಯೂಸ್​ ಇಂಟರ್ ನ್ಯಾಶನಲ್ ​ ವರದಿ ಮಾಡಿದೆ.

ಹರಿತವಾದ ಆಯುಧದಿಂದ ಕತ್ತು ಸೀಳಿದ ಸ್ಥಿತಿಯಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದಿಂದ ಹರಿತವಾದ ಕತ್ತಿ ಮತ್ತು ಗರಗಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತಪಟ್ಟವರಲ್ಲಿ ಓರ್ವ 35 ವರ್ಷದ ರಾಮ್ ಚಾಂದ್ ಎಂದು ಗುರುತಿಸಲಾಗಿದೆ. ಈತ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ಎಂದು ಸಾಮಾಜಿಕ ಕಾರ್ಯಕರ್ತ ಬ್ರಿಬಲ್ ದಾಸ್ ಅವರು ದಿ ನ್ಯೂಸ್ ಇಂಟರ್ ನ್ಯಾಶನಲ್ ಗೆ ಹೇಳಿಕೆ ನೀಡಿದ್ದಾರೆ.

- Advertisement -

MOST POPULAR

HOT NEWS

Related news

error: Content is protected !!