




ಪಂಜ ಸೀಮೆ ದೇವಾಲಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜ.24 ರಿಂದ ಫೆ.9 ರ ತನಕ, ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದ್ದು.
ಇಂದು (ಫೆ.5 ರಂದು) ಶ್ರೀ ದೇವರ ದರ್ಶನ ಉತ್ಸವ ಭಕ್ತಿ ಸಂಭ್ರಮದಿಂದ ನಡೆಯಿತು.ಪೂರ್ವಾಹ್ನ ಶ್ರೀ ದೇವರ ಬಲಿ ಹೊರಟು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ. ನಡೆಯಿತು.ಶ್ರೀ ದೇವಳದ ಬಲಿಯೊಂದಿಗೆ ವೇದ ಮಂತ್ರ ಘೋಷ, ಸ್ಯಾಕ್ರೋಫೋನ್, ಚೆಂಡೆ, ಬ್ಯಾಂಡ್ ವಾಲಗ ಬೇತಾಳಗಳು,ಗೊಂಬೆಗಳು, ಪಾರ್ಚೋಡು ವಿಖ್ಯಾತ್ ರೈ ರವರ ಗೂಳಿ ಪಾಲ್ಗೊಂಡಿದ್ದು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷರಾದ ಡಾ.ರಾಮಯ್ಯ ಭಟ್, ಪದ್ಮನಾಭ ರೈಅಗೋಳಿಬೈಲು ಗುತ್ತು, ಸದಸ್ಯ `ಸತ್ಯರಾಯಣ ಭಟ್, ಕಾಯಂಬಾಡಿ ರಾಮಚಂದ್ರ ಭಟ್, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಕಾಚಿಲ ಮರಕಡ, ಮಾಯಿಲಪ್ಪ ಗೌಡ ಎಣ್ಣೂರು, ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಶ್ರೀಮತಿ ಮಾಲಿನಿ ಕುದ್ವ, ಶ್ರೀಮತಿ ಪವಿತ್ರ ಮಲ್ಲೆಟಿ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ,ಪರಮೇಶ್ವರ ಬಿಳಿಮಲೆ ಉದಯ ಕುಮಾರ್ ಬೆಟ್ಟ, ಸೀಮೆಯ ಸಾವಿರಾರು ಭಕ್ತಾದಿಗಳು, ಅರ್ಚಕರು,ದೇವಳ ಸಿಬ್ಬಂದಿಗಳು ಉಪಸ್ಥಿತರಿದ್ದರು.ರಾತ್ರಿ ದೀಪೋತ್ಸವ, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಬೀದಿಕಟ್ಟೆ ಪೂಜೆ, ಕಾಚುಕುಜುಂಬ, ಶಿರಾಡಿ, ರುದ್ರಚಾಮುಂಡಿ ದೈವಗಳ ನರ್ತನ ಸೇವೆ, ವಸಂತ ಕಟ್ಟೆಪೂಜೆ, ಶ್ರೀ ದೇವರ ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ಗಂಟೆ 7 ರಿಂದ ಶ್ರುತಿ ಕಾಂತಾಜೆ ಮತ್ತು ಬಳಗದವರಿಂದ ಭಕ್ತಿ ಸಂಗೀತ” . ರಾತ್ರಿ ಗಂಟೆ 8 ರಿಂದ ಪ್ರಮೋದ್ ಕುಮಾರ್ ರೈ ಬೆಳ್ಳಾರೆ ಸಂಯೋಜನೆಯಲ್ಲಿ ಕಲಾ ಮಂದಿರ್ ಡ್ಯಾನ್ಸ್ ಬೆಳ್ಳಾರೆ ಮತ್ತು ಪಂಜ ಶಾಖೆಯ ವಿದ್ಯಾರ್ಥಿಗಳಿಂದ “ನೃತ್ಯ ಸಂಭ್ರಮ” ನಡೆಯಲಿದೆ.
ಸಂಜೆ ಗಂಟೆ 7 ರಿಂದ ಕೋಟಿ-ಚೆನ್ನಯ ಗರಡಿ ಮೈದಾನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ (ರಿ.) ಇವರಿಂದ ಯಕ್ಷಗಾನ ಬಯಲಾಟ’ ಪ್ರಚಂಡ ವಿಶ್ವಾಮಿತ್ರ ರಕ್ತರಾತ್ರಿ ನಡೆಯಲಿದೆ.ಫೆ.6 ಪೂರ್ವಾಹ್ನ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ರಾತ್ರಿ ಗಂಟೆ 11 ರಿಂದ ಬ್ರಹ್ಮ ರಥೋತ್ಸವ, ಕಾಚುಕುಜುಂಬ ದೈವದ ನರ್ತನ ಸೇವೆ. ಮಹಾಪೂಜೆ, ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ, ಅನ್ನಸಂತರ್ಪಣೆ ನಡೆಯಲಿದೆ.