Monday, July 22, 2024
spot_imgspot_img
spot_imgspot_img

ಪಂಜದಲ್ಲಿ ಅಕ್ರಮ ಮರ ಸಾಗಾಟ ಪತ್ತೆ. ಆರೋಪಿ ಬಂಧನ.*

- Advertisement -G L Acharya panikkar
- Advertisement -

ಸುಳ್ಯ :-ಪಂಜ ಅರಣ್ಯ ಇಲಾಖಾ ವ್ಯಾಪ್ತಿಯ ಐವತೊಕ್ಲು ಗ್ರಾಮದ ಪುಂಡಿಮನೆ ಎಂಬಲ್ಲಿ ಅಕ್ರಮ ಮರದ ದಿಮ್ಮಿ ಸಾಗಾಟ ಪ್ರಕರಣವನ್ನು ಅರಣ್ಯ ಇಲಾಖೆಯವರು ಪತ್ತೆ ಹಚ್ಚಿದ್ದು, ಮರ ಮತ್ತು ಪಿಕಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಮುಸ್ತಫಾ ಎಂಬವರನ್ನು, ಬಂಧಿಸಿಲಾಗಿದೆ.ನಂತರದಲ್ಲಿ ಇವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎನ್ನಲಾಗಿದೆ. ಪಿಕಪ್ ವಾಹನದಲ್ಲಿ 9ದಿಮ್ಮಿಹಾಗೂ ಸ್ಥಳದಲ್ಲಿ 29 ದಿಮ್ಮಿ ಸೇರಿ ಒಟ್ಟು 38 ದಿಮ್ಮಿಗಳು , ಇತರೆ ವಶಪಡಿಸಿಕೊಳ್ಳಲಾಗಿದೆ.ವಶಪಡಿಸಿಕೊಂಡ ಮರದ ಮೌಲ್ಯ ಅಂದಾಜು ಒಂದು ಲಕ್ಷ ರೂಪಾಯಿ ಹಾಗೂ ವಾಹನದ ಮೌಲ್ಯ ಎರಡು ಲಕ್ಷ ರೂಪಾಯಿ ಎನ್ನಲಾಗಿದೆ.

ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಸ್ಟೀನ್ ಸೋನ್ಸ್ ರವರ ಮಾರ್ಗದರ್ಶನದಲ್ಲಿ ಪಂಜ ವಲಯದ ಅರಣ್ಯಾಧಿಕಾರಿಗಳಾದ ಮಂಜುನಾಥ್ ನೇತೃತ್ವದಲ್ಲಿ,ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್,ಅರಣ್ಯ ರಕ್ಷಕರಾದ ಗೀತಾ ರಾಜೇಶ್,ಅರಣ್ಯ ವೀಕ್ಷಕರಾದ ಮಹೇಶ್, ವಿಜಯಕುಮಾರ್, ಮೋಹನ್ ಈ ಕಾರ್ಯಾಚರಣೆ ಮಾಡಿದರು.

- Advertisement -

Related news

error: Content is protected !!