- Advertisement -
- Advertisement -





ಸುಳ್ಯದ ಪೈಚಾರು ಮೂಲದ ವಿವಾಹಿತ ಮಹಿಳೆಯೋರ್ವರು ಹಳೆಗೇಟು ಅಡ್ಕ ಬಳಿ ಬಾಡಿಗೆ ಮನೆಯಲ್ಲಿ ಇಂದು ಮಧ್ಯಾಹ್ನ ಮೃತಪಟ್ಟಿದ್ದು ಕೌಟುಂಬಿಕ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.ಆದರೆ ಘಟನೆ ನಡೆದ ಸಂದರ್ಭ ಆಕೆಯ ಪತಿ ಸ್ಥಳದಲ್ಲಿಯೇ ಇದ್ದು ಮನೆಯವರು ಪತ್ನಿಯ ಮನೆಯವರು ಬಂದ ಸಮಯ ಅಲ್ಲಿಂದ ಆತ ಪರಾರಿಯಾಗಿರುವುದರಿಂದ ಇದು ಕೊಲೆಯಾಗಿರಬಹುದೇ ಎಂಬ ಅನುಮಾನವೂ ಮೂಡಿರುವುದಾಗಿ ಹೇಳಲಾಗುತ್ತಿದೆ.
ಮನೆಯೊಳಗೆ ಕಿರುಚಾಡುವ ಶಬ್ದ ಕೇಳಿ ಸ್ಥಳೀಯರು ಹೋಗಿ ನೋಡುವ ಸಂದರ್ಭ ಮಹಿಳೆ ನೆಲದ ಮೇಲೆ ಬಿದ್ದಿದ್ದರು ಎನ್ನಲಾಗಿದೆ.ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಆದರೆ ಮಹಿಳೆ ಅಷ್ಟರಲ್ಲಿ ಮೃತ ಪಟ್ಟಿದ್ದರು ಎಂದು ತಿಳಿದು ಬಂದಿದೆ.
- Advertisement -








