Friday, June 19, 2026
spot_imgspot_img
spot_imgspot_img

ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪತ್ತೆ!

- Advertisement -
- Advertisement -

ಬಂಟ್ವಾಳ : ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಕೇಲ್ದೋಡಿ‌ ಮನೆ ನಿವಾಸಿ ವ್ಯಕ್ತಿಯೊಬ್ಬರು, ಏಕಾಏಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪತ್ತೆಯಾಗಿ ಮಾ.7ರಂದು ಮನೆಗೆ ಮರಳಿದ್ದಾರೆ.

ಕೇಲ್ದೋಡಿ ನಿವಾಸಿ ಕೇಶವ ಪೂಜಾರಿ(36) ಅವರು ಜ.‌3ರಂದು ಮದುವೆಗೆ ಹೋಗುವುದಾಗಿ ಹೇಳಿ ಹೋದವರು ಹಿಂತಿರುಗಿ ಬಂದಿರಲಿಲ್ಲ. ಆದರೆ ಅವರು ಹಿಂದೆಯೂ 2-3 ಬಾರಿ ಇದೇ ರೀತಿ ಮನೆ ಬಿಟ್ಟು ಹೋಗಿ ಬಳಿಕ ಮನೆಗೆ ಮರಳಿದ್ದರು. ಹೀಗಾಗಿ ಅವರ ಪತ್ನಿ ಯಶೋಧಾ ಅವರು ತಡವಾಗಿ ದೂರು ನೀಡಿದ್ದರು.ಕೇಶವ ಆವರನ್ನು ಹುಡುಕಿ ಹುಡುಕಿ ಸೋತು ಹೋಗಿದ್ದ ಮನೆಯವರು ಹಾಗೂ ಊರಿನವರು ಮಾ. 1ರಂದು ಕೇಲ್ದೋಡಿ ಜಾತ್ರೆಯ ಸಂದರ್ಭದಲ್ಲಿ ವೈದ್ಯನಾಥ ದೈವದ ಬಳಿ ಪ್ರಾರ್ಥನೆ ಮಾಡಿದ್ದು, 12 ದಿನಗಳಲ್ಲಿ ಹುಡುಕಿ ಕೊಡುವ ಕುರಿತು ದೈವ ಮಾತುಕೊಟ್ಟಿತ್ತು. ಅಚ್ಚರಿ ಎಂಬಂತೆ ಏಳೇ ದಿನಗಳಲ್ಲಿ ಕೇಶವ ಪೂಜಾರಿ ಅವರು ಪತ್ತೆಯಾಗಿದ್ದಾರೆ.ಇದು ದೈವದ ಕಾರಣಿಕ‌ ಮತ್ತು ನಂಬಿಕೆಯ ಪ್ರತೀಕ ಎನ್ನಲಾಗಿದೆ.

- Advertisement -

Related news

error: Content is protected !!