- Advertisement -
- Advertisement -





ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಸಾಗಾಟದ ಟ್ಯಾಂಕರ್ ರಸ್ತೆ ಮಧ್ಯೆ ಪಲ್ಟಿಯಾದ ಘಟನೆ ಮಾಣಿ – ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಜಾಲ್ಲೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ನಡೆದಿದೆ.
ಮಂಗಳೂರಿನಿಂದ ಮಡಿಕೇರಿ ಕಡೆಗೆ ಡೀಸೆಲ್ ಹೊತ್ತೊಯ್ಯತ್ತಿದ್ದ ಟ್ಯಾಂಕರ್ ಬೈತಡ್ಕ ತಿರುವಿನಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿದ್ದು, ಘಟನೆಯಿಂದ ಟ್ಯಾಂಕರ್‌ನಲ್ಲಿ ಡೀಸಲ್ ಸೋರಿಕೆಯಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯಿಂದ ಚಾಲಕನಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
- Advertisement -








