Tuesday, May 14, 2024
spot_imgspot_img
spot_imgspot_img

ಪಾರ್ಟಿಗೆ ನಿರಾಕರಿಸಿದ ಪೋಷಕರು; ಮನನೊಂದು ಯುವಕ ಆತ್ಮಹತ್ಯೆಗೆ ಶರಣು..!

- Advertisement -G L Acharya panikkar
- Advertisement -

ಯುವಕನೋರ್ವ ಹೊಸ ವರ್ಷದ ಪಾರ್ಟಿಗೆ ಹೋಗಲು ಅವಕಾಶ ನೀಡದ್ದಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕಬೆಳಗಾವಿ ಹೊರವಲಯದ ‌ಕಣಬರ್ಗಿ ಗ್ರಾಮದ ಸಿದ್ದರಾಯ ಶಿಗಿಹಳ್ಳಿ (24) ಎಂದು ಗುರುತಿಸಲಾಗಿದೆ.

ಸಿದ್ದರಾಯ ಸ್ನೇಹಿತರ ಜೊತೆಗೆ ಹೊಸ ವರ್ಷದ ಪಾರ್ಟಿ ಮಾಡಲು ಯೋಜನೆ ರೂಪಿಸಿದ್ದ. ಆದರೆ, ಪಾರ್ಟಿ ಬೇಡ, ಮನೆಯಲ್ಲಿರು ಎಂದು ಕುಟುಂಬಸ್ಥರು ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕನ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!