Tuesday, July 28, 2026
spot_imgspot_img
spot_imgspot_img

ವಿಟ್ಲ: ಪಟ್ಟಣ ಪಂಚಾಯತ್ ನ ಉಪಾಧ್ಯಕ್ಷೆಯಾಗಿ ಉಷಾ ಕೃಷ್ಣಪ್ಪ ಆಯ್ಕೆ

- Advertisement -
- Advertisement -

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನ ಆಡಳಿತದ ಉಳಿದ ಅವಧಿಗೆ ಉಪಾಧ್ಯಕ್ಷೆಯಾಗಿ ಉಷಾ ಕೃಷ್ಣಪ್ಪ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಪರಿಶಿಷ್ಟ ಪಂಗಡ ಮೀಸಲಾತಿ ಬಂದಿದ್ದು ಜಯಂತ ನಾಯ್ಕ ಅವರು ಉಪಾಧ್ಯಕ್ಷರಾಗಿದ್ದರು. ಅವರ ಅವಧಿ ಮುಗಿದಿದ್ದು, ಹಿಂದುಳಿದ ವರ್ಗ ಎ ಮಹಿಳೆ ಮೀಸಲಾತಿ ಪ್ರಕಟಗೊಂಡಿದ್ದು, ಅದರಂತೆ ಉಷಾ ಕೃಷ್ಣಪ್ಪ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ.

ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಚುನಾವಣೆ ನಡೆಸಿಕೊಟ್ಟರು. ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಳಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಗ್ರಾಮ ಕರಣಿಕ ಪ್ರಕಾಶ್ ಸಹಕರಿಸಿದರು.

ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ಸದಸ್ಯರಾದ ಅರುಣ್ ಎಂ ವಿಟ್ಲ, ರಾಮ್ದಾಸ್ ಶೆಣೈ, ರವಿಪ್ರಕಾಶ್, ಶ್ರೀಕೃಷ್ಣ, ಲೋಕನಾಥ ಶೆಟ್ಟಿ ಕೊಲ್ಯ, ಜಯಂತ, ಚಂದ್ರಕಾಂತಿ ಶೆಟ್ಟಿ, ಇಂದಿರಾ ಅಡ್ಯಾಳಿ, ಗೀತಾ ಪುರಂದರ, ಸಂಧ್ಯಾ ಮೋಹನ್, ಬಿಜೆಪಿ ಪ್ರಮುಖರಾದ ಮೋಹನದಾಸ ಉಕ್ಕುಡ, ಉದಯಕುಮಾರ್ ಆಲಂಗಾರು, ಅಣ್ಣು ಪೂಜಾರಿ, ಕರುಣಾಕರ ನಾಯ್ತೋಟ್ಟು, ಭಾಗವಹಿಸಿದ್ದರು.

- Advertisement -

Related news

error: Content is protected !!