Thursday, June 4, 2026
spot_imgspot_img
spot_imgspot_img

ತಲೆನೋವಿಗೆ ಪುದೀನಾ ಟೀ

- Advertisement -
- Advertisement -

ಪುದೀನಾ ಎಲೆಗಳನ್ನು ಕುದಿಸಿ ತಯಾರಿಸಿದ ಟೀಯನ್ನು ಬಿಸಿಬಿಸಿಯಾಗಿ ಕುಡಿದರೆ ತಲೆನೋವು ಮತ್ತು ಅರೆತಲೆನೋವು ಕಡಿಮೆಯಾಗುತ್ತದೆ. ಅಲ್ಲದೇ ಹೊಟ್ಟೆ ನೋವು, ಅಜೀರ್ಣ, ವಾಕರಿಕೆ ಹಾಗೂ ವಾಯುಪ್ರಕೋಪವನ್ನೂ ಇದು ಕಡಿಮೆ ಮಾಡುತ್ತದೆ.

ಒಂದು ತುಂಡು ಶುಂಠಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಬೇಕು. ಇದಕ್ಕೆ ಒಂದು ಲೋಟ ನೀರು ಹಾಕಿ ಕುದಿಸಬೇಕು. ಇದನ್ನು ಸೋಸಿಕೊಂಡು ಚಹಾದಂತೆ ಕುಡಿಯಬೇಕು. ಅಲ್ಲದೇ ಇದರಿಂದ ಹೊರ ಸೂಸುವ ಆವಿಯನ್ನು ತೆಗೆದುಕೊಂಡರೂ ತಲೆನೋವು ಕಡಿಮೆಯಾಗುವುದು.

ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ತೆಗೆದುಕೊಂಡು ನೀರಿನೊಂದಿಗೆ ಮಿಶ್ರಣ ಮಾಡಿ ಪೇಸ್ಟ್‌ ಮಾಡಿಕೊಳ್ಳಬೇಕು. ಬಳಿಕ ಹಣೆಗೆ ಹಚ್ಚಿಕೊಳ್ಳಬೇಕು. ಸುಮಾರು 15-20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.

ತುಳಸಿ ಎಣ್ಣೆಯನ್ನು ಹಣೆಗೆ ಹಚ್ಚಿಕೊಂಡರೆ ಸ್ನಾಯುಗಳಿಗೆ ಹಿತ ಸಿಗುವುದು. ಇದರಿಂದ ಕೂಡ ತಲೆನೋವಿಗೆ ಪರಿಹಾರ ಸಿಗುತ್ತದೆ. ಇನ್ನೊಂದು ವಿಧಾನವೆಂದರೆ ಕುದಿಯುತ್ತಿರುವ ನೀರಿಗೆ ಸ್ವಲ್ಪ ತುಳಸಿ ಎಲೆಗಳನ್ನು ಹಾಕಬೇಕು. ತದನಂತರ ಇದನ್ನು 2-3 ನಿಮಿಷ ಕುದಿಯಲು ಬಿಡಬೇಕು. ಇದನ್ನು ಸೋಸಿಕೊಂಡು ಚಹಾದಂತೆ ಕುಡಿಯಬೇಕು.

ಕೆಲವು ಹನಿ ಲವಂಗದ ಎಣ್ಣೆ ಮತ್ತು ಅಷ್ಟೇ ಪ್ರಮಾಣದ ತೆಂಗಿನಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ಹಣೆಗೆ ಹಚ್ಚಿಕೊಂಡು, ನಿಧಾನವಾಗಿ ಮಸಾಜ್‌ ಮಾಡಿಕೊಂಡರೆ ತಲೆನೋವು ಕೂಡಲೇ ಕಡಿಮೆಯಾಗುವುದು.

ಕೊಬ್ಬರಿ ಎಣ್ಣೆ ಹಚ್ಚಿಕೊಂಡು ನಿಧಾನವಾಗಿ 15 ರಿಂದ 20 ನಿಮಿಷ ಮಸಾಜ್‌ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ. ಬೇಸಿಗೆಯ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ನೀಡುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ.

- Advertisement -

Related news

error: Content is protected !!