Friday, July 24, 2026
spot_imgspot_img
spot_imgspot_img

ಪೆರ್ಡೂರು: ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನಗಾರಿ ಗೋಪುರದ ಶಿಲಾನ್ಯಾಸ ಕಾರ್ಯಕ್ರಮ

- Advertisement -
- Advertisement -

ಪೆರ್ಡೂರು: ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನ ಶ್ರೀ ಕ್ಷೇತ್ರ ಪೆರ್ಡೂರು ಇದರ ನಗಾರಿ ಗೋಪುರದ ಶಿಲಾನ್ಯಾಸ ಕಾರ್ಯಕ್ರಮವು ದಿನಾಂಕ : 13-07-2025ನೇ ರವಿವಾರದಂದು ಬೆಳಿಗ್ಗೆ 9:00 ಗಂಟೆಗೆ ನಡೆಯಲಿದೆ. ಇದರ ಅಂಗವಾಗಿ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಕರ್ನಾಟಕ ಸರ್ಕಾರದ ಮಾನ್ಯ ಮುಜರಾಯಿ ಹಾಗೂ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿರವರು ಆಗಮಿಸಿ ನಗಾರಿ ಗೋಪುರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ.

ಪೂರ್ವಾಹ್ನ 9:00ರಿಂದ ಸಾಮೂಹಿಕ ಪ್ರಾರ್ಥನೆ, ಶ್ರೀ ದೇವಳದ ಜೀರ್ಣೋದ್ಧಾರದ ಪ್ರಯುಕ್ತ ಸಮಸ್ತ ಭಕ್ತರಿಗೆ “ಶ್ರೀ ದೇವರ ಅನಂತ ದೀಕ್ಷಾ ವಿಧಿ” ದ್ವಾದಶ ನಾಳಿಕೇರ ಗಣಯಾಗ ನಡೆದು ಬಳಿಕ ಪೂರ್ವಾಹ್ನ 10:00ಕ್ಕೆ ದಾರು ಮುಹೂರ್ತ, ಶಿಲಾ ಮುಹೂರ್ತ, ಭುವನೇಶ್ವರೀ ಪೂಜೆ ನಡೆಯಲಿದೆ. ಪೂರ್ವಾಹ್ನ 10:45ಕ್ಕೆ ನಗಾರಿ ಗೋಪುರದ ಶಿಲಾ ಪ್ರತಿಷ್ಠಾಪನೆ ನಡೆದು ಮಧ್ಯಾಹ್ನ 12:00ಕ್ಕೆ ಸುಮುಹೂರ್ತದಲ್ಲಿ ಶಿಲಾನ್ಯಾಸ, ಸಭಾ ಕಾರ್ಯಕ್ರಮ, ಶ್ರೀದೇವರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಪೂರ್ವಾಹ್ನ 11:00ರಿಂದ ಶ್ರೀ ಪೆರ್ಡೂರು ಮೇಳದ ಭಾಗವತ ಜನ್ಸಾಲೆ ರಾಘವೇಂದ್ರ ಅಚಾರ್ಯ ಮತ್ತು ಬಳಗದವರಿಂದ ಯಕ್ಷ ಗಾನವೈಭವ ನಡೆಯಲಿದೆ.

ಮಧ್ಯಾಹ್ನ 12:00ರಿಂದ ನಡೆಯುವ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸರಕಾರ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಶಿಲನ್ಯಾಸ ಕಾರ್ಯಕ್ರಮ ನೇರವೆರಿಸಲಿದ್ದಾರೆ. ಕೊರಂಗ್ರಪಾಡಿ ಉಡುಪಿ ದೇವಳದ ತಂತ್ರಿ ವಿದ್ವಾನ್‌ ಕೆ.ಪಿ ಕುಮಾರಗುರು ತಂತ್ರಿ ಶುಭಾಸಂಸನೆ ನೀಡಲಿದ್ದಾರೆ. ಪೆರ್ಡೂರು ಅನಂತಪದ್ಮನಾಭ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್‌ ರೈ ಪಳಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಹೆ ಮಣಿಪಾಲ ಸಹಕುಲಾಧಿಪತಿ ಡಾ| ಹೆಚ್‌.ಎಸ್‌ ಬಲ್ಲಾಳ್‌, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರ ಶಾಸಕ ಸುರೇಶ ಶೆಟ್ಟಿ ಗುರ್ಮೆ, ಕರ್ನಾಟಕ ಸರಕಾರ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಕರ್ನಾಟಕ ಸರಕಾರ ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ, ಅದಾನಿ ಗ್ರೂಪ್‌ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ, ಪೆರ್ಡೂರು ಮಾಜಿ ಮಂಡಲ ಪ್ರಧಾನರು ಶಾಂತಾರಾಮ ಸೂಡ ಕೆ., ಕರ್ನಾಟಕ ಸರಕಾರ ರಾಜ್ಯ ಧಾರ್ಮಿಕ ಪರಿಷತ್‌ನ ವಿಶೇಷ ಆಹ್ವಾನಿತ ರವಿಶಂಕರ ಶೆಟ್ಟಿ, ಕರ್ನಾಟಕ ಸರಕಾರ ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯೆ ಮಲ್ಲಿಕಾ ಪಕ್ಕಳ, ಗುಂಡಿಬೈಲು ಉಡುಪಿ ದೇವಳದ ವಾಸ್ತು ತಜ್ಞ ವಿದ್ವಾನ್‌ ಅವಧಾನಿ ಸುಬ್ರಹ್ಮಣ್ಯ ಭಟ್‌‌, ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ ಅರ್ಚಕ ರಘುಪ್ರಸಾದ ಅಡಿಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

- Advertisement -

Related news

error: Content is protected !!