ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಇದರ ಆಶ್ರಯದಲ್ಲಿ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ 5ನೇ ವರ್ಷದ ಗೋಪೂಜೆ, ಭಜನಾ ಸೇವೆ ಹಾಗೂ ಕಾರ್ತಿಕ ಪೂಜೆ ನಡೆಯಿತು.


ಸಭಾ ಕಾರ್ಯಕ್ರಮದಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಹಾಗೂ ವಕೀಲರಾದ ಪ್ರಸಾದ್ ಬಿ.ಸಿ ರೋಡ್ ಇವರು ಗೋವಿನ ಮಹತ್ವದ ಬಗ್ಗೆ ಬೌದ್ಧಿಕ್ ನೀಡಿದರು. ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡದ ಪ್ರಧಾನ ಕಾರ್ಯದರ್ಶಿ ಚರಣ್ ಕಾಪುಮಜಲು ಸಂಘಟನೆ ಕಾರ್ಯಚಟುವಟಿಕೆ ಬಗ್ಗೆ ಮಾತನಾಡಿದರು.


ಬಜರಂಗದಳ ವಿಟ್ಲ ಪ್ರಖಂಡದ ಪ್ರಮುಖರಾಗಿರುವ ಯತೀಶ್ ಪೆರುವಾಯಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಸಂಚಾಲಕರಾದ ಮೋಕ್ಷಿತ್ ಪೆರುವಾಯಿ ವಂದಿಸಿದರು. ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷರಾದ ಮಂಜುನಾಥ ಆಚಾರ್ಯ, ಅಧ್ಯಕ್ಷರಾದ ಶೇಖರ ಪೂಜಾರಿ, ಮಾತೃ ಶಕ್ತಿ ಅಧ್ಯಕ್ಷರಾದ ತುಳಸಿ ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು. ವರ್ಷಿತಾ ಆಚಾರ್ಯ ಪ್ರಾರ್ಥನೆ ಮಾಡಿದರು.

ನಾಗೇಶ್ ಮಾಸ್ಟರ್ ಕೊಲ್ಲತ್ತಡ್ಕ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಶಂಕರ ನಾರಾಯಣ ಮೂರ್ತಿ ವೈದಿಕ ಕಾರ್ಯಕ್ರಮ ನಿರ್ವಹಿಸಿದರು. ಭಜನಾ ಸೇವೆಯನ್ನು ಮಾತೆಯರು ಮಾಡಿದರು ಹಾಗೂ ಈ ಸಭಾ ವೇದಿಕೆಯಲ್ಲಿ ಕೋವಿಡ್ 19 ವಿರುದ್ಧ ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಪೆರುವಾಯಿ ಗ್ರಾಮದಲ್ಲಿ ಕೋವಿಡ್ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ರೇವತಿ ನಾರಾಯಣ ನಾಯ್ಕ ಕಡೆಂಬಿಲ, ಶ್ರೀಮತಿ ಸೌಮ್ಯ ವಸಂತ ಪುರುಷ ಓಣಿಬಾಗಿಲು, ಶ್ರೀಮತಿ ಬೇಬಿ ಬಾಲಕೃಷ್ಣ ಓಣಿಬಾಗಿಲು ಹಾಗೂ ಸುರೇಖಾ ಸದಾನಂದ ಶೆಟ್ಟಿ ದರ್ಖಾಸು ಇವರನ್ನು ಶಾಲು ಹಾಕಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.











