Thursday, June 4, 2026
spot_imgspot_img
spot_imgspot_img

ಪೆರುವಾಯಿ: ಹಿಂದೂ ಬಡ ಕುಟುಂಬಕ್ಕೆ ಆಸರೆಯಾದ ಮುಸ್ಲಿಂ ಐಕ್ಯ ವೇದಿಕೆ

- Advertisement -
- Advertisement -

ಪೆರುವಾಯಿ: ಇಲ್ಲಿನ ಮುಚ್ಚಿರಪದವು ಎಂಬಲ್ಲಿ ಸಂಜೀವ ಮೊಗೇರ ಎಂಬವರ ಮನೆ ಶೋಚನೀಯ ಸ್ಥಿತಿಗೆ ಬಂದು ತಲುಪಿತ್ತು. ಮಳೆಯಿಂದಾಗಿ ಮನೆ ಹಾನಿಯಾಗಿ ಕುಟುಂಬ ಸಂಕಷ್ಟದಲ್ಲಿ ಜೀವನವನ್ನು ಸಾಗಿಸುತ್ತಿದ್ದರು. ಇದನ್ನು ಮನಗಂಡ ಮುಸ್ಲಿಂ ಐಕ್ಯ ವೇದಿಕೆ ಪೆರುವಾಯಿ ಸಂಜೀವ ಮೊಗೇರ ಅವರಿಗೆ ನೂತನ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.

ಕುಟುಂಬದ ಸದಸ್ಯರಿಂದ ಯಾವುದೇ ರೀತಿಯ ಹಣಕಾಸಿನ ಸಹಾಯ ಪಡೆದಯದೇ ಯುವಕರು ಸೇರಿಸಿಕೊಂಡು ೧ ಲಕ್ಷ ರೂ. ಅಂದಾಜಿನಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಸಾರಣೆ, ಪೈಂಟಿAಗ್, ವಿದ್ಯುತ್ ಕೆಲಸ ಯುವಕರೇ ಸೇರಿಸಿಕೊಂಡು ಮಾಡಿದ್ದಾರೆ.

driving

ಬಡ ಕುಟುಂಬಕ್ಕೆ ಆಸರೆಯಾದ ಮುಸ್ಲಿಂ ಐಕ್ಯ ವೇದಿಕೆಯ ಸದಸ್ಯರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೋಮು ಬೀಜ ಬಿತ್ತುವ ಈ ಕಾಲಘಟ್ಟದಲ್ಲಿ ಸೌಹಾರ್ದತೆಯೂ ನಮ್ಮ ಕಣ್ಣಮುಂದಿದೆ. ಯುವಕ ಸೌಹಾರ್ದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

- Advertisement -

Related news

error: Content is protected !!