Friday, April 26, 2024
spot_imgspot_img
spot_imgspot_img

ದೇಶದಲ್ಲಿ ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿರುವ ತೈಲ ಬೆಲೆ; ಪೆಟ್ರೋಲ್ ನಂತರ ದಶಕ ದಾಟಿದ ಡೀಸೆಲ್ ಬೆಲೆ.!

- Advertisement -G L Acharya panikkar
- Advertisement -

ಮಂಗಳೂರು: ತೈಲ ಬೆಲೆಯು ದಿನದಿಂದ ದಿನಕ್ಕೆ ದೇಶದಲ್ಲಿ ದಾಖಲೆ ಬರೆಯುತ್ತಿದೆ. ಮತ್ತೆ ಪೆಟ್ರೋಲ್, ಡೀಸೆಲ್ ದರವನ್ನು ಪ್ರತಿ ಲೀಟರಿಗೆ 35 ಪೈಸೆಗಳಷ್ಟು ಹೆಚ್ಚಿಸಿವೆ.

ಇದರಿಂದಾಗಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವು  ₹110ರ ಗಡಿಗೆ ಸಮೀಪಸಿದರೆ, ಹೈದರಾಬಾದ್‌ನಲ್ಲಿ  ₹110.09 ತಲುಪಿದೆ. ಹಾಗೇ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ದರವು  ₹100 ದಾಟಿದ್ದು, ಪೆಟ್ರೋಲ್ ದರ  ₹109.53 ಆಗಿದೆ. ಹೈದರಾಬಾದ್‌ನಲ್ಲಿ ಡೀಸೆಲ್  ₹103.08 ಮುಟ್ಟಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ  ₹105.84 ಮತ್ತು ಡೀಸೆಲ್  ₹94.57 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 34 ಪೈಸೆ ಹೆಚ್ಚಳವಾಗಿ  ₹111.77 ಮತ್ತು ಡೀಸೆಲ್ 37 ಪೈಸೆ ಹೆಚ್ಚಳವಾಗಿ  ₹102.52 ಆಗಿದೆ.

ಇಂಧನ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರಗಳು ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಸುಂಕ ಕಡಿತಗೊಳಿಸುವುದಿಲ್ಲ ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿದೆ.

- Advertisement -

Related news

error: Content is protected !!