Sunday, June 7, 2026
spot_imgspot_img
spot_imgspot_img

*ಪೆಟ್ರೋಲ್ ಬಂಕ್ ದರೋಡೆ*

- Advertisement -
- Advertisement -

ಬಂಟ್ವಾಳ: ರವಿವಾರ ಮುಂಜಾನೆ ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ಇಬ್ಬರು ಕೆಲಸಗಾರರಿಗೆ ಚೂರಿ ತೋರಿಸಿ ಹಣ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡದಿದ್ದಲ್ಲಿ ಕೊಲ್ಲುವುದಾಗಿ ಬೆದರಿಸಿದ್ದಾರೆ.

ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪದ ದಾಸಕೋಡಿ ಪೆಟ್ರೋಲ್ ಬಂಕ್ ಗೆ ರವಿವಾರ ಮುಂಜಾನೆ ಆಗಮಿಸಿದ ತಂಡವೊಂದು ಸಿಬ್ಬಂದಿಯನ್ನು ಬೆದರಿಸಿ ನಗದು ದೋಚಿದ ಘಟನೆ ನಡೆದಿದೆ. ಬಳಿಕ 22 ಸಾವಿರ ರೂ.ಗಳನ್ನು ದೋಚಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಳ್ಳರ ತಂಡ ಬಂಟ್ವಾಳ ಸೇರಿದಂತೆ ಮಂಗಳೂರಿನ ಹಲವು ಪೆಟ್ರೋಲ್ ಬಂಕ್ ಗಳಿಗೆ ನುಗ್ಗಿ ಹಣ ದೋಚುವುದಕ್ಕೆ ಪ್ರಯತ್ನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!