Thursday, May 2, 2024
spot_imgspot_img
spot_imgspot_img

ಪ್ರೇಯಸಿಯ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್; ಆರೋಪಿ ಅರೆಸ್ಟ್

- Advertisement -G L Acharya panikkar
- Advertisement -
vtv vitla

ತನ್ನ ಪ್ರೇಯಸಿಯ ಖಾಸಗಿ ಫೋಟೋವನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬಳಿಕ ಆಕೆಯ ಜೊತೆಯೇ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ಯುವಕನನ್ನು ಆಗ್ನೇಯ ವಿಭಾಗ ಸೆನ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ತಮಿಳುನಾಡು ಮೂಲದ ಅಂಜಯ್ (26) ಎಂದು ತಿಳಿದು ಬಂದಿದೆ. ಪೊಲೀಸ್‌ ತನಿಖೆಯಲ್ಲಿ ವಿಕೃತ ಕಾಮಿಯ ನವರಂಗಿ ಆಟ ಬಯಲಾಗಿದೆ. ಇವನು ಖಾಸಗಿ ಫೋಟೋಗಳನ್ನು ಪೋಸ್ಟ್ ಮಾಡಿ ಅದಕ್ಕೆ ಬರುವ ಕಮೆಂಟ್ ನಿಂದ ಸುಖ ಪಡುತ್ತಿದ್ದನಂತೆ, ಸದ್ಯ ಈ ವಿಕೃತ ಮನಸ್ಸಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಜೊತೆಗೆ ಈತನ 12 ಜನ ಸ್ನೇಹಿತರು ಕೂಡ ಇದೇ ಮನಸ್ಸಿನವರು. ಇವರೆಲ್ಲ ಟೆಲಿಗ್ರಾಮ್‌ನಲ್ಲಿ d3vil-official ಮತ್ತು discord ಎಂಬ ಹೆಸರಿನ ಗ್ರೂಪ್ ಮಾಡಿಕೊಂಡಿದ್ದರು. ಆ ಗ್ರೂಪ್‌ನಲ್ಲಿ ತಮ್ಮ ತಮ್ಮ ಪ್ರೇಯಸಿ, ಸ್ನೇಹಿತೆಯರ ನಗ್ನ ಫೋಟೋಗಳನ್ನು ಹಾಕುತ್ತಿದ್ದರು. ಹೀಗೆ ಸುಮಾರು ನೂರಕ್ಕು ಹೆಚ್ಚು ಯುವತಿಯರ ಫೋಟೋ ಶೇರ್ ಮಾಡಿದ್ದಾರೆ. ಅಲ್ಲದೇ @thediyahouse, @denofd3vil, @houseofd3vil, @heavenbyd3vil2 ಹೆಸರಿನ ಇನ್ಸ್ಟಾಗ್ರಾಮ್ ಖಾತೆ ತೆಗೆದು ಅದರಲ್ಲೂ ಅಪ್ಲೋಡ್ ಮಾಡಿದ್ದಾರೆ. ಫೋಟೋಗಳಿಗೆ ಬರುತ್ತಿದ್ದ ಅಸಹ್ಯ ಕಮೆಂಟ್‌ಗಳನ್ನು ಓದಿ ಈ ಕಾಮುಕರು ಸುಖಿಸುತ್ತಿದ್ದರು ಎಂಬ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಆರೋಪಿ ಅಂಜಯ್‌ ಜೊತೆ ಮದುವೆ ಆಗಬೇಕು ಎಂಬ ಯೋಚನೆಯಲ್ಲಿದ್ದಾಗಲೇ ಪ್ರಿಯತಮೆಗೆ ತನ್ನ ಪ್ರೇಮಿಯ ನವರಂಗಿ ಆಟ ಗೊತ್ತಾಗಿದೆ. ತಮಿಳುನಾಡು ವೆಲ್ಲೂರು ಮೂಲದ ಅಂಜಯ್ ಹಾಗೂ ಯುವತಿ ಇಬ್ಬರೂ ಒಂದೇ ಊರಿನವರಾಗಿದ್ದರು. 10ನೇ ತರಗತಿಯಿಂದ ಒಟ್ಟಿಗೆ ಓದುತ್ತಿದ್ರು. ಬಿ.ಪ್ಲಾನಿಂಗ್ ಅನ್ನೋ ಕೋರ್ಸ್ ಮಾಡಿದ್ದ ಇವರು ನಂತರ ಬೆಂಗಳೂರಿಗೆ ಬಂದು ಒಟ್ಟಿಗೆ ವಾಸವಾಗಿದ್ದರು. ಇವರ ಪ್ರೀತಿ ವಿಚಾರ ಎರಡು ಕುಟುಂಬಸ್ಥರಿಗೂ ಗೊತ್ತಿತ್ತು. ಅಲ್ಲದೇ ಮದುವೆ ಮಾಡಿಸುವ ತಯಾರಿ ಕೂಡ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

2021ರಲ್ಲಿಯೂ ಇನ್ಸಾ ಗ್ರಾಮ್‌ನಲ್ಲಿ ಯುವತಿ ಫೋಟೋ ಷೇರ್ ಆಗಿತ್ತು. ಆಗ ರಿಪೋರ್ಟ್ ಮಾಡಿ ಫೋಟೋ ತೆಗಿಸಲಾಗಿತ್ತು. ಮತ್ತೆ 2023 ಜೂನ್ ನಲ್ಲಿ ಯುವತಿಯ ಫೋಟೋ ಶೇರ್ ಆಗಿತ್ತು. ಆಗ ಈ ವಿಚಾರವನ್ನು ಯುವತಿ ತನ್ನ ಪ್ರಿಯತಮ ಅಂಜಯ್‌ಗೆ ಹೇಳಿದ್ದಳು. ಯುವತಿ ಜೊತೆಗೆ ಸೆನ್ ಪೊಲೀಸ್ ಠಾಣೆಗೆ ಬಂದು ಆರೋಪಿ ಪತ್ತೆ ಮಾಡಿ ಫೋಟೋ ಡಿಲಿಟ್ ಮಾಡಿಸಿ ಎಂದು ಆರೋಪಿ ಅಂಜಯ್‌ ಪೊಲೀಸರ ಬಳಿ ಬೇಡಿಕೊಂಡಿದ್ದ. ಆತನ ಡ್ರಾಮಾ ನೋಡಿ ಯುವತಿ ಕಣ್ಣೀರು ಹಾಕಿದ್ದಳು. ತನ್ನ ಪ್ರಿಯಕರನಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇದೆ ಎಂದು ಖುಷಿ ಪಟ್ಟಿದ್ದಳು. ಆದರೆ ಈಗ ಕಾಮುಕನ ನವರಂಗಿ ಆಟ ಬಯಲಾಗಿದೆ.

ಪ್ರಕರಣ ದಾಖಲಿಸಿ ತನಿಖೆಗೆ ಇಳಿದಿದ್ದ ಆಗ್ನೇಯ ವಿಭಾಗ ಸನ್ ಪೊಲೀಸರಿಗೆ ವಿಚಾರಣೆ ವೇಳೆ ಆರೋಪಿಯ ವಿಕೃತ ಕಾಮ ಬೆಳಕಿಗೆ ಬಂದಿದೆ. ಈ ಕುರಿತು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ವಿಚಾರಣೆ ವೇಳೆ ಆತನ ಮತ್ತಷ್ಟು ಕಾಮಕೃತ್ಯ ಬಯಲಾಗಿದ್ದು ಅರೋಪಿ BOT ಅನ್ನುವ ಅಪ್ಲಿಕೇಶನ್ ಡೆವಲಪ್ ಮಾಡ್ತಿದ್ದನು. ಆ ಅಪ್ಲಿಕೇಶನ್‌ನಲ್ಲಿ ಯಾರದ್ದೇ ಫೋಟೋ ಹಾಕಿದ್ರು ಬೆತ್ತಲೆಯಾಗಿ ತೋರಿಸುತ್ತಂತೆ. ಅದೇ ರೀತಿ ಸ್ನೇಹಿತ, ಸಂಬಂಧಿಕರ ಫೋಟೋ ಹಾಕಿ ಬೆತ್ತಲೆ ಚಿತ್ರ ನೋಡಿ ವಿಚಿತ್ರ ಸುಖ ಪಡ್ತಿದ್ದ ಎಂದು ಆರೋಪಿ ತನಿಖೆಯಲ್ಲಿ ಬಾಯ್ದಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!