Thursday, May 2, 2024
spot_imgspot_img
spot_imgspot_img

ವೈದ್ಯರ ನಿರ್ಲಕ್ಷ್ಯ; ಆರು ತಿಂಗಳ ಗರ್ಭಿಣಿ ಮೃತ್ಯು..!

- Advertisement -G L Acharya panikkar
- Advertisement -

ವೈದ್ಯರ ಹಣದಾಸೆಗೆ ತಾಯಿ-ಮಗು ಬಲಿಯಾದ ಆರೋಪವೊಂದು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ಆರು ತಿಂಗಳ ಗರ್ಭಿಣಿ ಪವಿತ್ರಾ ಎಚ್ ಎಂದು ಗುರುತಿಸಲಾಗಿದೆ.

ಪವಿತ್ರಾ ಎಚ್ ಮೊಳಕಾಲ್ಮೂರು ತಾಲೂಕಿನ ಬಾಂಡ್ರವಿ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಗರ್ಭಿಣಿಯಾಗಿದ್ದ ಪವಿತ್ರಾ ಲೋಟಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೆಗ್ಯೂಲರ್ ಚೆಕಪ್ ಮಾಡಿಸಿಕೊಳ್ಳುತ್ತಿದ್ದರು. ಪವಿತ್ರಾ ಚೆಕಪ್ ಗೆಂದು ಆಸ್ಪತ್ರೆಗೆ ಬಂದಿದ್ದ ವೇಳೆ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಸ್ಕ್ಯಾನಿಂಗ್​ ನಂತರ ಮಗುವಿನ ಹೃದಯ ಬಡಿತ ನಿಂತಿದೆ ಎಂದು ಲೋಟಸ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಧೃಢಪಡಿಸಲು ಬಳ್ಳಾರಿಯ ಕ್ಲಾರಿಟಿ ಡೈಗ್ನೋಸ್ಟಿಕ್ ಸೆಂಟರ್ ನಲ್ಲಿ ಸ್ಕ್ಯಾನಿಂಗ್ ಮಾಡಲಿಸಲು ಸೂಚನೆ ನೀಡಿದ್ದರು. ಬಳಿಕ ಪವಿತ್ರಾ ಸ್ಕ್ಯಾನಿಂಗ್ ರಿಪೋರ್ಟನ್ನು ಲೋಟಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಬಳಿಕ ಪವಿತ್ರಾ ಪತಿ ಲೋಟಸ್ ಆಸ್ಪತ್ರೆಗೆ ಕರೆ ಮಾಡಿದ್ದಾರೆ. ಈ ವೇಳೆ ಕೂಡಲೇ ಆಸ್ಪತ್ರೆಗೆ ಬರುವಂತೆ ಲೋಟಸ್ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ನಂತರ ನರ್ಸ್ ಸರಸ್ವತಿ ಎಂಬಾಕೆ ಪವಿತ್ರಾರನ್ನು ಆಡ್ಮಿಟ್ ಮಾಡಿಕೊಂಡು 28 ಸಾವಿರ ಫೀಸ್ ಕಟ್ಟಿಸಿಕೊಂಡಿದ್ದಾರೆ. ಪವಿತ್ರಾ 7-20ಕ್ಕೆ ಅಡ್ಮಿಟ್ ಆದರು ವೈದ್ಯಾಧಿಕಾರಿಗಳು 12-40 ಕ್ಕೆ ಬಂದಿದ್ದಾರೆ. ರಾತ್ರಿ ಹೈ ಬಿಪಿ ಮತ್ತು ಹೃದಯಾಘಾತದಿಂದ ಪವಿತ್ರಾ ಸಾವನ್ನಪ್ಪಿದ್ದಾರೆ. ಪವಿತ್ರಾ ಪತಿ ವೈದ್ಯರು ನಿರ್ಲಕ್ಷ ತೋರಿದ್ದರಿಂದಲೇ ತಾಯಿ ಮಗು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಡಾ. ಶಬ್ಬೀರ್, ಡಾ. ಶ್ರೀದೇವಿ ವಿರುದ್ಧ ಪವಿತ್ರಾ ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಂಪುರ ಪೊಲೀಸ್ ಠಾಣೆಗೆ ತೆರಳಿ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!