Sunday, June 14, 2026
spot_imgspot_img
spot_imgspot_img

ಪುತ್ತೂರು : (ಅ.5-6 ) “ಪುತ್ತೂರುದ ಪಿಲಿಗೊಬ್ಬು ಫುಡ್ ಪೆಸ್ಟ್ : ಸೀಸನ್ -2 “

- Advertisement -
- Advertisement -

ಪುತ್ತೂರು: ಪುತ್ತೂರುದ ಪಿಲಿಗೊಬ್ಬು ಹಾಗೂ ಪುತ್ತೂರು ಫುಡ್ ಫೆಸ್ಟ್ ಅ.5 ಶನಿವಾರ ಹಾಗೂ ಅ.6 ಭಾನುವಾರದಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಪುತ್ತೂರು ವಿಜಯ ಸಾಮ್ರಾಟ್ ನ, ಪಿಲಿಗೊಬ್ಬು ಸಾರಥಿ ಸಹಜ್ ರೈ ಬಳಜ್ಜ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಪಿಲಿ ಗೊಬ್ಬು ಕಾರ್ಯಕ್ರಮದ ಉದ್ಘಾಟನೆ ಅ.6 ಭಾನುವಾರ ಬೆಳಿಗ್ಗೆ 10:30ಕ್ಕೆ ಗಂಟೆಗೆ ನಡೆಯಲಿದ್ದು, ಬೆಳಗ್ಗೆಯಿಂದ ರಾತ್ರಿಯವರೆಗೆ ನಿರಂತರವಾಗಿ ಪಿಲಿ ಗೊಬ್ಬು ಕಾರ್ಯಕ್ರಮ ನಡೆಯಲಿದೆ.

2020ರಲ್ಲಿ ವಿಜಯ ಸಾಮ್ರಾಟ್‌ ಪುತ್ತೂರು ಸಂಸ್ಥೆ ಆರಂಭಗೊಂಡಿದ್ದು ಇದೀಗ ಇನ್ನೂರಕ್ಕೂ ಅಧಿಕ ಯುವಕರು ಸೇರಿ ಸಾಮಾಜಿಕದ ಜೊತೆಗೆ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕೋವಿಡ್‌ ಸಮಯದಲ್ಲೂ ಕೂಡ ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಸಂಸ್ಥೆಬಂದಿದೆ.

ಪಿಲಿಗೊಬ್ಬು ಸೀಸನ್‌-1ರ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರಿದ್ದು ಯಶಸ್ವಿಯಾಗಿ ಮೂಡಿ ಬಂದಿದೆ. ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಮೋಹನ್ ಆಳ್ವರವರು ಪಿಲಿಗೊಬ್ಬು ವೇದಿಕೆಗೆ ಚಾಲನೆಯನ್ನು ನೀಡಲಿದ್ದಾರೆ. ಪಿಲಿಗೊಬ್ಬು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈ ಮಾಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಹಿರಿಯ ವೈದ್ಯ ಡಾ.ಪ್ರಸಾದ್ ಭಂಡಾರಿ, ಡಿವೈಎಸ್ ಪಿ ಅರುಣ್ ನಾಗೇಗೌಡ, ಮಾಜಿ ಶಾಸಕ ಸಂಜೀವ ಮಠಂದೂರು, ಸಂಸದ ಕ್ಯಾ-ಬೃಜೇಶ್‌ ಚೌಟ, ಸಹಿತ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

- Advertisement -

Related news

error: Content is protected !!