Sunday, May 19, 2024
spot_imgspot_img
spot_imgspot_img

ಕ್ವಿಟ್‌ ಇಂಡಿಯಾ ಚಳುವಳಿ ರಾಷ್ಟ್ರದ ಯುವಜನರಿಗೆ ಶಕ್ತಿ ತುಂಬಿದೆ; ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಶ್ರೇಷ್ಠ ವ್ಯಕ್ತಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಶ್ರೇಷ್ಠರಿಗೆ ನಾನು ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಇದು ವಸಾಹತುಶಾಹಿಯ ವಿರುದ್ದದ ಹೋರಾಟವನ್ನು ಬಲಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ” ಎಂದು ತಿಳಿಸಿದ್ದಾರೆ.”ಮಹಾತ್ಮ ಗಾಂಧಿಯವರಿಂದ ಪ್ರೇರಿತವಾಗಿ ಕ್ವಿಟ್‌ ಇಂಡಿಯಾ ಚಳುವಳಿಯ ಚೈತನ್ಯವು ಭಾರತದಾದ್ಯಂತ ಪ್ರತಿಧ್ವನಿಸಿತು ಹಾಗೂ ರಾಷ್ಟ್ರದ ಯುವಜನರಿಗೆ ಶಕ್ತಿ ತುಂಬಿದೆ” ಎಂದು ಹೇಳಿದ್ದಾರೆ.

ಕ್ವಿಟ್‌ ಇಂಡಿಯಾ ಚಳುವಳಿಯು ಆಗಸ್ಟ್ 1942ರಲ್ಲಿ ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ನಡೆಯಿತು. ಆಗಸ್ಟ್ 8ರಂದು ಮುಂಬೈಯ ಗೊವಾಳಿಯ ಮೈದಾನದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಘೋಷಣೆಯೊಂದಿಗೆ ಪ್ರಾರಂಭವಾಯಿತು.

- Advertisement -

Related news

error: Content is protected !!