Monday, May 6, 2024
spot_imgspot_img
spot_imgspot_img

ಪ್ರಧಾನಿ ಮೋದಿ ಪಂಜಾಬ್‌ ಭೇಟಿ ವೇಳೆ ದೊಡ್ಡ ಭದ್ರತಾ ಲೋಪ; ಪ್ರವಾಸ ರದ್ದು

- Advertisement -G L Acharya panikkar
- Advertisement -
suvarna gold

ಪ್ರಮುಖ ಭದ್ರತಾ ಉಲ್ಲಂಘನೆಯ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫಿರೋಜ್‌ಪುರಕ್ಕೆ ತಮ್ಮ ನಿಗದಿತ ಭೇಟಿಯನ್ನು ಬುಧವಾರ ರದ್ದುಗೊಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯಾ ಅವರು ಫಿರೋಜ್‌‌ಪುರದಲ್ಲಿ ನಡೆದ ಕಾರ್ಯಕ್ರಮದ ಸ್ಥಳದಲ್ಲಿ ವೇದಿಕೆಯಿಂದ ಕೆಲವು ಕಾರಣದಿಂದ ಪ್ರಧಾನಿ ಮೋದಿ ಅವರು ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಫಿರೋಜ್‌ಪುರಕ್ಕೆ ಭೇಟಿ ನೀಡಿ ಹಲವಾರು ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಹಾಗೂ ಈ ವೇಳೆ ಜನತೆಯನ್ನುದ್ದೇಶಿಸಿ ಭಾಷಣ ಮಾಡಲು ತೀರ್ಮಾನಿಸಲಾಗಿತ್ತು. ಇಂದು ಪ್ರಧಾನಿಯವರು ಬಟಿಂಡಾಕ್ಕೆ ಬಂದಿಳಿದಿದ್ದರು. ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಫಿರೋಜ್‌ಪುರ ಜಿಲ್ಲೆಯತ್ತ ತೆರಳಿದ್ದರು.

ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಟಿಂಡಾಕ್ಕೆ ಬಂದಿಳಿದಿದ್ದರು. ಅಲ್ಲಿಂದ ಅವರು ಹೆಲಿಕಾಪ್ಟರ್ ಮೂಲಕ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಬೇಕಾಗಿತ್ತು. ಸುಧಾರಿತ ಹವಾಮಾನ ಇಲ್ಲದ ಕಾರಣ, ಅವರು ರಸ್ತೆ ಮೂಲಕ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ತೀರ್ಮಾನಿಸಲಾಯಿತು.

ಇದಕ್ಕೆ 2 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಡಿಜಿಪಿ ಪಂಜಾಬ್‌ ಪೊಲೀಸರು ಅವಶ್ಯಕವಾದ ಭದ್ರತಾ ವ್ಯವಸ್ಥೆಗಳನ್ನು ದೃಢೀಕರಿಸಿದ ನಂತರ ಅವರು ರಸ್ತೆ ಮೂಲಕ ಪ್ರಯಾಣಿಸಲು ಮುಂದಾದರು.

vtv vitla
vtv vitla

ಹುಸೇನಿವಾಲಾದ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30 ಕಿ.ಮೀ ದೂರದಲ್ಲಿ, ಪ್ರಧಾನಮಂತ್ರಿಯವರ ಬೆಂಗಾವಲು ಪಡೆ ಫ್ಲೈಓವರ್ ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಧಾನಿ 15-20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿದ್ದರು. ಇದು ಪ್ರಧಾನ ಮಂತ್ರಿಯವರ ಭದ್ರತೆಯಲ್ಲಿ ಒಂದು ದೊಡ್ಡ ಲೋಪವಾಗಿತ್ತು. ಈ ಭದ್ರತಾ ಲೋಪದ ಬಳಿಕ ಬಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂದಿರುಗಲು ತೀರ್ಮಾನಿಸಲಾಯಿತು.

ಈ ಗಂಭೀರವಾದ ಭದ್ರತಾ ಲೋಪದ ಬಗ್ಗೆ ತಿಳಿದ ಗೃಹ ವ್ಯವಹಾರಗಳ ಸಚಿವಾಲಯ, ರಾಜ್ಯ ಸರ್ಕಾರದಿಂದ ವಿವರವಾದ ವರದಿಯನ್ನು ಕೋರಿದೆ. ಈ ಲೋಪಕ್ಕೆ ಹೊಣೆಯನ್ನು ಸರಿಪಡಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೂ ಸೂಚನೆ ನೀಡಲಾಗಿದೆ.

vtv vitla
vtv vitla
- Advertisement -

Related news

error: Content is protected !!