Thursday, April 18, 2024
spot_imgspot_img
spot_imgspot_img

ಜನರಲ್ ಬಿಪಿನ್ ರಾವತ್‌‌ಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ

- Advertisement -G L Acharya panikkar
- Advertisement -

ನವದೆಹಲಿ: ಕಳೆದ ವರ್ಷ ಡಿಸೆಂಬರ್‌‌ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಸೋಮವಾರ ಪ್ರದಾನ ಮಾಡಲಾಯಿತು.

ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಬಿಪಿನ್ ರಾವತ್ ಅವರ ಪುತ್ರಿಯರಾದ ಕೃತಿಕಾ ರಾವತ್ ಮತ್ತು ತಾರಿಣಿ ರಾವತ್ ಪ್ರಶಸ್ತಿ ಸ್ವೀಕರಿಸಿದರು.

vtv vitla
vtv vitla

ಇನ್ನು 73ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಗೃಹ ಸಚಿವಾಲಯವು ಪದ್ಮ ಪ್ರಶಸ್ತಿಗಳನ್ನು ಘೋಷಿದ್ದು, ಜನರಲ್ ರಾವತ್ ಅವರ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಅಪಘಾತಕ್ಕೀಡಾದಾಗ ಸ್ಟಾಫ್ ಕೋರ್ಸ್ನ ಬೋಧಕ ಮತ್ತು ವಿದ್ಯಾರ್ಥಿ ಅಧಿಕಾರಿಗಳನ್ನ ಉದ್ದೇಶಿಸಿ ಮಾತನಾಡಲು ವೆಲ್ಲಿಂಗ್ಟನ್ನಲ್ಲಿರುವ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿಗೆ ತೆರಳುತ್ತಿದ್ದರು.

ಈ ಪ್ರಶಸ್ತಿಗೆ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷ ಸೈರಸ್ ಪೂನಾವಾಲಾ ಭಾಜನರಾಗಿದ್ದಾರೆ.

vtv vitla
vtv vitla
- Advertisement -

Related news

error: Content is protected !!