- Advertisement -
- Advertisement -



ಸಮಾಜದ ಸ್ವಾಸ್ಥ್ಯ ಕೆಡಿಸುವ ಕೋಮು ಶಕ್ತಿಗಳ ನಿರ್ಮೂಲನಕ್ಕಾಗಿ SAF ವಿಶೇಷ ಕಾರ್ಯಪಡೆಯನ್ನು ಪೋಲೀಸ್ ಇಲಾಖೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇತ್ತೀಚೆಗೆ ರಚಿಸಲಾಗಿತ್ತು. ಇಂದು ಸಂಜೆ ವಿಟ್ಲದಲ್ಲಿ Special Action Force (SAF) ನ ಪಥಸಂಚಲನ ನಡೆಯಿತು.ಜನರಲ್ಲಿ ವಿಶೇಷ ಜಾಗೃತಿ ಮೂಡಿಸುವ ಸಲುವಾಗಿ SAF ನಿಂದ ಪಥಸಂಚಲನ ಕಾರ್ಯಕ್ರಮ ನಡೆಯಿತು. ವಿಟ್ಲ ಠಾಣೆಯಿಂದ ಹೊರಟ ಪಥಸಂಚಲನವು ನಾಲ್ಕು ಮಾರ್ಗ, ಅಡ್ಡಬೀದಿಯಾಗಿ ವಿಟ್ಲದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.

SAF ನ ಸಬ್ ಇನ್ಸ್‌ಪೆಕ್ಟರ್ ನಿಜಲಿಂಗಪ್ಪ, ಸಿಂಗಣ್ಣ ಪಟೇಲ್ ವಿಟ್ಲ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಗ ರತನ್ ಕುಮಾರ್, ಬಿ.ಎಸ್. ನಾಯಕ್ತ್ತು ಸಿಬ್ಬಂದಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು.
- Advertisement -








