Thursday, May 2, 2024
spot_imgspot_img
spot_imgspot_img

ಶನಿವಾರ, ಭಾನುವಾರ ಬೆಂಗಳೂರಲ್ಲಿ ಕಂಬಳ- ಮಾರ್ಗ ಬದಲಾವಣೆಗೆ ಸೂಚನೆ

- Advertisement -G L Acharya panikkar
- Advertisement -

ಬೆಂಗಳೂರು: ಇತಿಹಾಸ ಪ್ರಸಿದ್ದ ಕರಾವಳಿ ಕಂಬಳಕ್ಕೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‍ನಲ್ಲಿ ಕೌಂಟ್‍ಡೌನ್ ಶುರುವಾಗಿದೆ.

25 ಮತ್ತು 26 ನೇ ತಾರೀಖಿಗೆ 2 ದಿನಗಳ ಕಾಲ ನಡೆಯುವ ರೋಚಕ ಕಂಬಳಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದೆ. ಕಂಬಳ ವೀಕ್ಷಣೆಗೆ ಲಕ್ಷಾಂತರ ಜನ ಬರುವ ನಿರೀಕ್ಷೆಯಿದ್ದು, ಹೆಬ್ಬಾಳ ರಸ್ತೆಯಲ್ಲಿ ಟ್ರಾಫಿಕ್ ಉಂಟಾಗುವ ನಿರೀಕ್ಷೆ ಇದೆ. ಹೀಗಾಗಿ ಸಂಚಾರದಲ್ಲಿ ಟ್ರಾಫಿಕ್ ಪೊಲೀಸರು ಒಂದಷ್ಟು ಬದಲಾವಣೆ ಮಾಡಿದ್ದಾರೆ.

ಬದಲಿ ಮಾರ್ಗ ಬಳಸಲು ಸೂಚನೆ ನೀಡಿದ್ದಾರೆ. ಕಂಬಳಕ್ಕೆ ಬರುವ ಸಾರ್ವಜನಿಕರ ವಾಹನಗಳಿಗೆ ಕೃಷ್ಣವಿಹಾರ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಿಬಿಡಿ ಕಡೆಯಿಂದ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ಯೂಟರ್ನ್ ಪಡೆದು ಕೃಷ್ಣವಿಹಾರ್ ತಲುಪುವುದು. ಬಳ್ಳಾರಿ ರಸ್ತೆಯಲ್ಲಿ ಬರುವ ವಾಹನಗಳು ಮೇಖ್ರಿ ಸರ್ಕಲ್ ಮೂಲಕ ಗೇಟ್ ನಂಬರ್ 1 ರಲ್ಲಿ ಅರಮನೆ ಮೈದಾನಕ್ಕೆ ಎಂಟ್ರಿಯಾಗಲಿದೆ. ಯಶವಂತಪುರ ಕಡೆಯಿಂದ ಬರುವ ವಾಹನಗಳು ಮೇಖ್ರಿ ಸರ್ಕಲ್ ನಲ್ಲಿ ಬಲ ತಿರುವು ಪಡೆದು ಅರಮನೆ ಮೈದಾನ ಎಂಟ್ರಿ. ಕ್ಯಾಬ್ ನಲ್ಲಿ ಬರುವ ಸಾರ್ವಜನಿಕರಿಗೆ ಗೇಟ್ 2 ರಲ್ಲಿ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ.

ಬದಲಿ ಮಾರ್ಗ:
ಅರಮನೆ ರಸ್ತೆಯಿಂದ- ಮೈಸೂರು ಬ್ಯಾಂಕ್ ಸರ್ಕಲ್, ಎಂವಿ ಜಯರಾಮ ರಸ್ತೆ- ಅರಮನೆ ರಸ್ತೆ, ಬಳ್ಳಾರಿ ರಸ್ತೆ- ಮೇಖ್ರಿ ಸರ್ಕಲ್ ನಿಂದ ಎಲ್ ಆರ್ ಡಿಇ ಜಂಕ್ಷನ್ ವರೆಗೆ, ಕನ್ನಿಂಗ್ ಹ್ಯಾಮ್ ರಸ್ತೆ- ಬಾಳೆಕುಂದ್ರಿ ಸರ್ಕಲ್ ನಿಂದ ಲೀ ಮೆರಿಡಿಯನ್ ಅಂಡರ್ ಪಾಸ್, ಮಿಲ್ಲರ್ ರಸ್ತೆಯಿಂದ ಎಲ್ ಆರ್ ಡಿಇ ಜಂಕ್ಷನ್, ಜಯಮಹಲ್ ರಸ್ತೆ ಹಾಗೂ ಪ್ಯಾಲೇಸ್ ಸುತ್ತಮುತ್ತಲಿನ ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.

ಪಾರ್ಕಿಂಗ್ ನಿಷೇಧ ಏರಿಯಾಗಳು:
ಎಂವಿ ಜಯರಾಮ ರಸ್ತೆ, ವಸಂತನಗರ, ನಂದಿದುರ್ಗ ರಸ್ತೆ, ಜಯಮಹಲ್ ರಸ್ತೆ, ರಮಣ ಮಹರ್ಷಿ ರಸ್ತೆ, ತರಳಬಾಳು ರಸ್ತೆ, ಸಿ ವಿ ರಾಮನ್ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧ ಹೇರಲಾಗಿದೆ.‌

ಭಾರೀ ವಾಹನಗಳಿಗೂ ನಿಷೇಧ:
ಕಂಟ್ಮೋನೆಂಟ್ ರೈಲ್ವೆ ಸ್ಟೇಷನ್, ಬಿಎಲ್, ಹೆಬ್ಬಾಳ ಜಂಕ್ಷನ್, ಕಾವೇರಿ ಜಂಕ್ಷನ್, ಬಸವೇಶ್ವರ ಜಂಕ್ಷನ್, ಐಐಎಸ್‍ಸಿ ಜಂಕ್ಷನ್ ಸುತ್ತಮುತ್ತ ಭಾರೀ ವಾಹನಗಳನ್ನು ನಿಷೇಧಿಸಲಾಗಿದೆ. ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ, ಮಧ್ಯಾಹ್ನ 3 ರಿಂದ ರಾತ್ರಿ 10 ಗಂಟೆಯವರೆಗೆ ನಿಷೇಧ ಹೇರಲಾಗಿದೆ.

- Advertisement -

Related news

error: Content is protected !!