Sunday, July 26, 2026
spot_imgspot_img
spot_imgspot_img

ದಕ್ಷಿಣ ಕನ್ನಡದಲ್ಲಿ 2 ನೂತನ ಪೊಲೀಸ್ ಠಾಣೆಗಳಿಗೆ ಪ್ರಸ್ತಾವನೆ; ವ್ಯಾಪ್ತಿ ಪ್ರದೇಶಗಳ ವಿವರ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಪೊಲೀಸ್ ಘಟಕದಲ್ಲಿ ನೂತನವಾಗಿ ಕಾರ್ಯಾರಂಭಗೊಳ್ಳಲಿರುವ ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿ ಪ್ರದೇಶಗಳನ್ನು ಸಂಯೋಜಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಪ್ರಸ್ತಾವನೆಯ ಪ್ರಕಾರ ಸಜಿಪನಡು ಪೊಲೀಸ್ ಠಾಣೆ ಮತ್ತು ಮಾಣಿ ಪೊಲೀಸ್ ಠಾಣೆ ಎಂಬ ಎರಡು ಹೊಸ ಠಾಣೆಗಳು ಸ್ಥಾಪನೆಗೊಳ್ಳಲಿದ್ದು, ಅವುಗಳ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಪಟ್ಟಿಯನ್ನು ಕೂಡ ನಿಗದಿಪಡಿಸಲಾಗಿದೆ.

ಸಜಿಪನಡು ಪೊಲೀಸ್ ಠಾಣೆ ವ್ಯಾಪ್ತಿ:


ಮಂಚಿ, ಇರಾ, ಸಜಿಪನಡು, ಸಜಿಪಪಡು, ಚೇಳೂರು, ಬೋಳಂತೂರು, ವೀರಕಂಬ, ಕೊಳ್ನಾಡು, ಸಾಲೆತ್ತೂರು, ಸಜಿಪಮೂಡ ಹಾಗೂ ಸಜಿಪ ಮುನ್ನೂರು ಗ್ರಾಮಗಳು ಸಜಿಪನಡು ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡಲಿವೆ.

.
ಮಾಣಿ ಪೊಲೀಸ್ ಠಾಣೆ ವ್ಯಾಪ್ತಿ:
ಶಂಭೂರು, ಬರಿಮಾರು, ಕಡೆಶಿವಾಲಯ, ನೆಟ್ಲಮಡ್ನೂರು, ಅನಂತಾಡಿ, ಇಡ್ಕಿದು, ಮಾಣಿ, ಪೆರಾಜೆ, ಬಾಳ್ತಿಲ, ಗೋಲ್ತಮಜಲು, ಕೊಡಿಪ್ಪಾಡಿ, ಕಬಕ ಹಾಗೂ ಕೆದಿಲ ಗ್ರಾಮಗಳನ್ನು ಮಾಣಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಕುರಿತು ಅಂತಿಮ ನಿರ್ಧಾರ ಸರ್ಕಾರದ ಅನುಮೋದನೆ ಬಳಿಕ ಪ್ರಕಟವಾಗಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

- Advertisement -

Related news

error: Content is protected !!