Monday, January 25, 2021

ಮದುವೆಯಾದ ಹತ್ತೇ ದಿನಕ್ಕೆ ಗಂಡನ ವಿರುದ್ಧ ದೂರು ನೀಡಿ ಜೈಲಿಗಟ್ಟಿದ ಪೂನಂ ಪಾಂಡೆ…!

ಪಣಜಿ: ಇತ್ತೀಚೆಗಷ್ಟೇ ಮದುವೆಯಾದ ಮಾದಕ ನಟಿ ಪೂನಂ ಪಾಂಡೆ ನೀಡಿದ ದೂರಿನ ಆಧಾರದ ಮೇಲೆ ಆಕೆಯ ಪತಿ ಸ್ಯಾಮ್​ ಬಾಂಬೆ ಅವರನ್ನು ಗೋವಾದಲ್ಲಿ ಮಂಗಳವಾರ ಬಂಧಿಸಲಾಗಿದೆ.

ಪೂನಂ ಪಾಂಡೆ ಪ್ರಸ್ತುತ ಶೂಟಿಂಗ್​ಗಾಗಿ ಗೋವಾದ ಕ್ಯಾನಕೋನಾ ಗ್ರಾಮದಲ್ಲಿದ್ದು, ಪತಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ ಆಧಾರದ ಮೇಲೆ ಗೋವಾ ಪೊಲೀಸರು ಸ್ಯಾಮ್​ ಬಾಂಬೆರನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.

ಸೋಮವಾರ ರಾತ್ರಿ ನನ್ನ ಪತಿ ಕಿರುಕುಳ ನೀಡಿದರು. ಅಲ್ಲದೆ, ಹಲ್ಲೆ ಮಾಡಿ ಪ್ರಾಣ ಬೆದರಿಕೆ ಕೂಡ ಹಾಕಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಯಾಮ್​ ಬಾಂಬೆಯನ್ನು ಬಂಧಿಸಿರುವುದಾಗಿ ಕ್ಯಾನಕೋನಾ ಠಾಣಾ ಇನ್ಸ್​ಪೆಕ್ಟರ್ ತುಕರಾಮ್​ ಚಾವಣ್​ ಮಾಹಿತಿ ನೀಡಿದ್ದಾರೆ.​

ಸ್ಯಾಮ್​ರನ್ನು​ ಮದುವೆಯಾಗಿರುವುದಾಗಿ ಸೆಪ್ಟೆಂಬರ್​ 11 ರಂದು ತನ್ನ ಇನ್​ಸ್ಟಾಗ್ರಾಂನಲ್ಲಿ ಪೂನಂ ತಿಳಿಸಿದ್ದರು. ಮುಂಬೈನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿರುವ ಬಗ್ಗೆ ತಿಳಿಸಿ, ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು.

- Advertisement -

MOST POPULAR

HOT NEWS

Related news

LEAVE A REPLY

Please enter your comment!
Please enter your name here

error: Content is protected !!