Tuesday, July 21, 2026
spot_imgspot_img
spot_imgspot_img

ಪುರ್ಪುಂಜ: ಮಹೀಂದ್ರ ಥಾರ್‌ನಲ್ಲಿ ಎಂಡಿಎಂ ಸಾಗಾಟ ಪತ್ತೆ – ಮೂವರು ಕೇರಳ ಮೂಲದ ಆರೋಪಿಗಳು ಬಂಧನ- ಬಂಧಿತರಿಂದ ಒಟ್ಟು ರೂ. 38,42,000 ಮೌಲ್ಯದ ಸೊತ್ತು ಹಾಗೂ ತಲವಾರು ವಶಕ್ಕೆ

- Advertisement -
- Advertisement -

ಪುತ್ತೂರು, ಫೆ. 19: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿಶೇಷ ತಂಡವು ಅಂತರ್‌ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾದಕ ವಸ್ತು ಮಾರಾಟಗಾರರ ಜಾಲವನ್ನು ಭೇದಿಸಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಒಟ್ಟು ರೂ. 38,42,000 ಮೌಲ್ಯದ ಮಾದಕ ವಸ್ತು, ವಾಹನ, ಮಾರಕಾಸ್ತ್ರ, ಮೊಬೈಲ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿ

.


ಬಂಧಿತ ಆರೋಪಿಗಳನ್ನು 1) ಮುಹಮ್ಮದ್ ಅಜ್ಮಲ್ ಸಿ @ ಅಜ್ಜು (30), ಚೆನ್ನಿಲೊಟ್ಟು, ವೇಲಂ, ವಡಕರ್ ತಾಲೂಕು, ಕೋಝಿಕೋಡ್ ಜಿಲ್ಲೆ, ಕೇರಳ, 2) ಇಸ್ಮಾಯಿಲ್ (28), ಮುಂಡಿಕುಂಞಲ್, ಚರುಕಾಟುರ್ ಗ್ರಾಮ, ಮಾನಂದವಾಡಿ, ವಯನಾಡ್ ಜಿಲ್ಲೆ, ಕೇರಳ, 3) ಸಂಶೀರ್ (27), ಕಹ್ನೀರಾ, ಪಾಲೇರಿ ಗ್ರಾಮ, ಕೋಝಿಕೋಡ್ ಜಿಲ್ಲೆ, ಕೇರಳ ಎಂದು ಗುರುತಿಸಲಾಗಿದೆ.


ಪೊಲೀಸರು ರೂ. 5,38,800 ಮೌಲ್ಯದ 53.58 ಗ್ರಾಂ MDMA, ರೂ. 18 ಲಕ್ಷ ಮೌಲ್ಯದ ಮಹೀಂದ್ರ ಕಂಪನಿಯ ಥಾರ್ ವಾಹನ, ಮಾರಕಾಸ್ತ್ರ, ರೂ. 1,52,000 ಮೌಲ್ಯದ ಮೊಬೈಲ್‌ಗಳು ಹಾಗೂ ರೂ. 10,000 ನಗದು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 25/2026ರಡಿ NDPS Act 1985ರ ಕಲಂ 8C, 22(C), 29 ಹಾಗೂ Arms Act ಕಲಂ 25(1B)(B)ರಡಿ ಪ್ರಕರಣ ದಾಖಲಾಗಿದೆ.


ಪೊಲೀಸರ ಮಾಹಿತಿ ಪ್ರಕಾರ, ಪ್ರಮುಖ ಆರೋಪಿ ಮುಹಮ್ಮದ್ ಅಜ್ಮಲ್ ಸಿ @ ಅಜ್ಜು ಕೇರಳ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದನು. ಈತನ ವಿರುದ್ಧ ಕೇರಳ ರಾಜ್ಯದ ಕೋಝಿಕೋಡ್, ಕಣ್ಣೂರು ಹಾಗೂ ವಯನಾಡ್ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿದ್ದನು.


ಇತ್ತೀಚೆಗೆ ಪುತ್ತೂರು ಗ್ರಾಮಾಂತರ ಠಾಣೆಯ ಅ.ಕ್ರ. 04/2026 ಪ್ರಕರಣದಲ್ಲೂ ಈತ ಪ್ರಮುಖ ಆರೋಪಿ ಆಗಿದ್ದು, ಆ ಪ್ರಕರಣದಲ್ಲಿ ಬಂಧಿತರಾದ ಮಹಮ್ಮದ್ ಶಾಬಾದ್ (ಕಾಸರಗೋಡು), ಅಬ್ದುಲ್ ನಾಸೀರ್ ಎ.ಪಿ (ನೆಟ್ಟಣಿಗೆ ಮುಡ್ನೂರು, ಪುತ್ತೂರು) ಹಾಗೂ ವಿಧು ಕೃಷ್ಣನ್ (ತಲಿಪರಂಭ, ಕಣ್ಣೂರು)ರಿಂದ ರೂ. 1,64,000 ಮೌಲ್ಯದ 16.26 ಗ್ರಾಂ MDMA ಹಾಗೂ ರೂ. 11 ಲಕ್ಷ ಮೌಲ್ಯದ ಎರಡು ಕಾರುಗಳು ಹಾಗೂ ಮೊಬೈಲ್‌ಗಳು ವಶಪಡಿಸಿಕೊಳ್ಳಲಾಗಿತ್ತು.


ಈ ಎರಡು ಪ್ರಕರಣಗಳಲ್ಲಿ ಒಟ್ಟು 69.84 ಗ್ರಾಂ MDMA (ರೂ. 6,98,000 ಮೌಲ್ಯ), ಮೂರು ವಾಹನಗಳು (ರೂ. 29 ಲಕ್ಷ), ರೂ. 2 ಲಕ್ಷ ಮೌಲ್ಯದ ಮೊಬೈಲ್‌ಗಳು ಹಾಗೂ ರೂ. 44,000 ನಗದು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಮೌಲ್ಯ ರೂ. 38,42,000 ಆಗಿದೆ.


ವಿಶೇಷ ತಂಡದ ಕಾರ್ಯಾಚರಣೆ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಮಾದಕ ವಸ್ತು ಮಾರಾಟ ಹಾಗೂ ಸೇವನೆ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿದಿದೆ. ಈ ಪ್ರಕರಣ ಪತ್ತೆ ಕಾರ್ಯದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್, ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್, ಡಿ.ಎಸ್.ಬಿ. ಪೊಲೀಸ್ ನಿರೀಕ್ಷಕ ನಂದ ಕುಮಾರ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.


ಜಿಲ್ಲಾ ಪೊಲೀಸ್ ಇಲಾಖೆ ಮಾದಕ ವಸ್ತು ಜಾಲದ ವಿರುದ್ಧ ಕಠಿಣ ಕ್ರಮ ಮುಂದುವರಿಸುವುದಾಗಿ ತಿಳಿಸಿದೆ.

- Advertisement -

Related news

error: Content is protected !!