Thursday, July 23, 2026
spot_imgspot_img
spot_imgspot_img

ಉತ್ತರ ಜಪಾನ್‌ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ

- Advertisement -
- Advertisement -

ಟೋಕಿಯೊ: ಉತ್ತರ ಜಪಾನ್‌ನಲ್ಲಿ ಸೋಮವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಜಪಾನ್‌ನ ಹವಾಮಾನ ಸಂಸ್ಥೆ(ಜೆಎಂಎ) ತಿಳಿಸಿದ್ದು, ಮೂರು ಮೀಟರ್(10 ಅಡಿ) ಎತ್ತರದ ಅಲೆಗಳ ಸುನಾಮಿ ಎಚ್ಚರಿಕೆ ನೀಡಿದೆ.

ಉತ್ತರ ಇವಾಟೆ ಪ್ರಾಂತ್ಯದ ಪೆಸಿಫಿಕ್ ಸಮುದ್ರದಲ್ಲಿ ಸಂಜೆ 4:53 ಕ್ಕೆ ಭೂಕಂಪ ಸಂಭವಿಸಿ, ನೂರಾರು ಕಿಲೋಮೀಟರ್ ದೂರದಲ್ಲಿರುವ ಟೋಕಿಯೊದವರೆಗಿನ ದೊಡ್ಡ ಕಟ್ಟಡಗಳು ಕಂಪಿಸುವಷ್ಟು ಪ್ರಬಲವಾಗಿತ್ತು.

ಆರಂಭಿಕ ಸುನಾಮಿ ಅಲೆಗಳು ಉತ್ತರ ಕರಾವಳಿಯನ್ನು ತಕ್ಷಣವೇ ತಲುಪಬಹುದು ಎಂದು ಹವಾಮಾನ ಸಂಸ್ಥೆ ತಿಳಿಸಿದೆ. ಸುನಾಮಿ ಅಲೆಗಳಿಂದ ಹಾನಿಯಾಗುವ ನಿರೀಕ್ಷೆಯಿದೆ. ತಕ್ಷಣ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ವಿಶ್ವದ ಭೂಕಂಪ ಪೀಡಿತ ದೇಶಗಳಲ್ಲಿ ಜಪಾನ್‌ ಕೂಡ ಒಂದಾಗಿದ್ದು, ಪೆಸಿಫಿಕ್ ‘ರಿಂಗ್ ಆಫ್ ಫೈರ್’ನ ಪಶ್ಚಿಮ ಅಂಚಿನಲ್ಲಿರುವ ನಾಲ್ಕು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಮೇಲ್ಭಾಗದಲ್ಲಿ ಜಪಾನ್ ಇದೆ. ಹೀಗಾಗಿ, ದೇಶದಲ್ಲಿ ನಿರಂತರವಾಗಿ ಭೂಕಂಪವಾಗುತ್ತಿರುತ್ತದೆ. ಸುಮಾರು 12.5 ಕೋಟಿ ಜನರಿಗೆ ನೆಲೆಯಾಗಿರುವ ಈ ದ್ವೀಪಸಮೂಹವು ಪ್ರತಿ ವರ್ಷ ಸುಮಾರು 1,500 ಕಂಪನಗಳನ್ನು ಅನುಭವಿಸುತ್ತದೆ. ವಿಶ್ವದ ಭೂಕಂಪಗಳಲ್ಲಿ ಸುಮಾರು 18%ನಷ್ಟು ಇಲ್ಲೇ ಸಂಭವಿಸುತ್ತದೆ. 2011 ರಲ್ಲಿ ಜಪಾನ್‌ನಲ್ಲಿ 9.0 ತೀವ್ರತೆಯ ಭೂಕಂಪವು ಸುನಾಮಿಗೆ ಕಾರಣವಾಗಿತ್ತು. ಇದು 18,500 ಜನರನ್ನು ಬಲಿ ತೆಗೆದುಕೊಂಡಿತ್ತು ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!