Monday, April 29, 2024
spot_imgspot_img
spot_imgspot_img

ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರಕಾಶ್​ ರಾಜ್​; ಸನಾತನ ಧರ್ಮವನ್ನು ಕಾಗೆಗೆ ಹೋಲಿಸಿದ ನಟ

- Advertisement -G L Acharya panikkar
- Advertisement -

ನಟ ಪ್ರಕಾಶ್ ರೈ ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸುವ ಮೂಲಕ ಮತ್ತೊಮ್ಮೆ ವಿವಾದ ಎಳೆದುಕೊಂಡಿದ್ದಾರೆ.

ಕಲಬುರಗಿ ನಗರದ ಪಂಡಿತ್ ರಂಗಮಂದಿರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸನಾತನ ಧರ್ಮ ಅಂದ್ರೆ ಏನು ಅಂತಾ ಪ್ರಶ್ನಿಸಿದಾಗ, ಮನುಷ್ಯ ಬದಲಾಗುವುದಿಲ್ಲ ನಾನು ಎನ್ನುವುದು ಪ್ರಕೃತಿಗೆ ವಿರುದ್ಧ ನಾನೇ ಶ್ರೇಷ್ಠ ಅಂತಾನೆ. ಯಾವ ಧರ್ಮ, ಮಾನವೀಯ ಧರ್ಮ ಅಸ್ಪ್ರಶ್ಯತೆ ಹೇಳುತ್ತಾ?. ಧರ್ಮ ಅನ್ನೋ ಕಥೆ ಹೇಗಂದ್ರೆ ಕಾಗೆಗಳು ಎಲ್ಲವು ಸೇರಿಕೊಂಡಿದ್ದವಂತೆ. ಕಾಗೆಗಳು ಸೇರಿಕೊಂಡು ನಾವೇ ಜಾಸ್ತಿ ಇದ್ದಿವಿ ಕೋಗಿಲೆ, ನವೀಲು ನಮ್ಮ ಮಾತು ಕೇಳಬೇಕು ಅಂದ್ರೆ ಹೆಂಗೆ ?. ಕ್ರೌರ್ಯಕ್ಕೆ ಕರುಣೆ ಇಲ್ಲ , ಹಾಗಾಗಿ ಅದಕ್ಕೆ ಧರ್ಮ ಇಲ್ಲ. ಕರುಣೆ ಇಲ್ಲದ್ದು ಹೇಗೆ ಧರ್ಮ ಆಗುತ್ತೆ. ನಿನ್ನೆಯವರೆಗೂ ಹಿಂದುತ್ವ ಹಿಂದೂ ಧರ್ಮ ಅಂತಿದ್ದವರು ಸನಾತನ ಅಂತಿದ್ದಾರೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಸನಾತನ ಧರ್ಮದ ಬಗ್ಗೆ ಮಾತನಾಡುವವರು ಯಾರೂ ಹಿಂದೂಗಳಲ್ಲ. ಇವರೆಲ್ಲಾ ರಾಜಕೀಯ ಲಾಭಕ್ಕಾಗಿ ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ಅಮವಾಸ್ಯೆ ಅಂದ್ರೆ ಚೆನ್ನಾಗಿಲ್ವಂತೆ, ಆದ್ರೆ ಚಂದ್ರಯಾನ ಮಾಡ್ತಾರಂತೆ, ಎಲ್ಲಾ ಧರ್ಮಗಳು ವಿಕಾರ ಇದೆ ಧರ್ಮಯುದ್ದ ಯಾವಾಗ ಮುಗಿಯುತ್ತೆ ಎನ್ನೊದು ಗೊತ್ತಾಗಲ್ಲ. ಧರ್ಮ ಯುದ್ಧ ಕಾಳ್ಗಿಚ್ಚು ಇದ್ದಂತೆ ಮೂಲನೂ ಗೊತ್ತಾಗಲ್ಲಾ ಅಂತ್ಯನೂ ಗೊತ್ತಾಗಲ್ಲ. ಹಿಂದೆ ರಾಜರ ಕಾಲದಲ್ಲಿ ರಾಜರ ಜೊತೆ ಕೆಲಸ ಮಾಡುವವರಿಗೆ ಕೆಲವೊಮ್ಮೆ ಸಂಬಳ ಕೊಡೋಕೆ ಆಗುತ್ತಿರಲಿಲ್ಲ. ಆಗ ಆ ಸೈನಿಕರು ಲೂಟಿ, ಅತ್ಯಾಚಾರ ಹಾಗೂ ದರೋಡೆ ಮಾಡಿಕೊಂಡು ಹೋಗುತ್ತಿದ್ದರು. ಇಂತಹವರನ್ನೇ ರಾಜಕಿಯದಲ್ಲೂ ಬಳಸಿಕೊಳ್ಳುತ್ತಿದ್ದಾರೆ ಎಂದರು

ರೌಡಿಗಳನ್ನು ರಾಜಕೀಯಕ್ಕೆ ಯಾಕೆ ಸೇರಿಸಿಕೊಳ್ಳುತ್ತೀರಾ? ಅಂತವರನ್ನೆ ಎಂಪಿ ಮಾಡ್ತೀರಾ?, ರೌಡಿಶೀಟರ್ ಗಳನ್ನು ಸೇರಿಸಿಕೊಳ್ಳುತ್ತಿರಾ ಎಂದು ಪ್ರಶ್ನಿಸಿದರು. ನಾನು ಯಾವುದೇ ಧರ್ಮದ ವಿರುದ್ಧ ಅಲ್ಲ. ನಾವು ಧರ್ಮದ ಬಗ್ಗೆ ಮಾತಾಡುತ್ತಿಲ್ಲ. ರಾಜಕಾರಣಿ ಏನೂ ಧರ್ಮ ಗುತ್ತಿಗೆ ಪಡೆದಿದ್ದಾರಾ? ನಾನು ಜನರನ್ನು ಪ್ರೀತಿಸುವ ಮನುಷ್ಯ, ರೋಗ ಅವರಿಗೆ ನನಗಲ್ಲ. ಸ್ಟಾಲೀನ್ ಮಾತಾಡಿದ್ದು ತಪ್ಪೇನಿದೆ. ಅಸ್ಪೃಶ್ಯತೆ ಹೋಗಬೇಕು ಇಲ್ಲವೋ? ಅವರ ಹೇಳಿಕೆಯನ್ನ ತಿರುಚಲಾಗಿದೆ ಎಂದು ವಾಗ್ದಾಳಿ ನಡೆಸಿದರು.ಜಾತಿ ವಿವಾದ ಹುಟ್ಟು ಹಾಕುವವರಿಗೆ ಬೇರೆ ಕೆಲಸ ಇಲ್ವಲ್ಲ. ಅದಕ್ಕೆ ಈ ರೀತಿ ಮಾಡ್ತಿದ್ದಾರೆ.

ನಾನು ಯಾರನ್ನು ನಂಬೋ ಸ್ಥಿತಿಯಲ್ಲಿ ಇಲ್ಲ. ಈ ಐದಾರು ವರ್ಷಗಳ ರಾಜಕಾರಣದಲ್ಲಿ ಅರ್ಥ ಆಗೋಯ್ತು. ಇವನ ಬಿಲ್ಡಿಂಗ್ ನಲ್ಲಿ ಅವನ ಬಾಲ್ ಇದೆ. ಅವನ ಮದುವೆ ಮಂಟಪದಲ್ಲಿ ಇವನ ಮದುವೆ ನಡೆಯುತ್ತೆ. ನಾನು ಜನರನ್ನ ಮಾತ್ರ ನಂಬಿಕೊಂಡಿದ್ದೇನೆ. ಇನ್ನು ನನ್ನಂತೆ ಇತರೆ ನಟರು ಯಾಕೆ ಮಾತನಾಡಲ್ಲ ಎಂಬ ಪ್ರಶ್ನೆಗೂ ಸಹ ಪ್ರಕಾಶ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದು ಪ್ರಶ್ನೆಗೆ ಒಂದೆ ಉತ್ತರ. ಚಡ್ಡಿ ಹಾಕೊಂಡವರಿಗೆ ದೇಶ ಕಾಣಿಸೋದಿಲ್ಲ. ಅವರೆಲ್ಲ ಚಡ್ಡಿ ಹಾಕೊಂಡಿದ್ದಾರೆ ಅಂತಾ ಇವಾಗ ಗೋತ್ತಾಯ್ತು ಇಷ್ಟು ವರ್ಷ ಗೊತ್ತಿರಲಿಲ್ಲ ಎಂದರು. ಗೆಳೆಯರು, ಆತ್ಮೀಯರನ್ನ ಕಳೆದುಕೊಂಡಿದ್ದೇನೆ ನೋವಾಗುತ್ತೆ. ನನಗೆ ಹೇಳ್ತಾರೆ ಯಾಕೆ ಮಾತಾಡ್ತಿಯಾ ಮೌನವಾಗಿರಬೇಕು ಅಂತಾ ನಿನ್ನ ಕರಿಯರ್ ನೋಡಿಕೊಳ್ಳಬೇಕು ಅಂತಾ. ನನ್ನ ಒಬ್ಬನ ಕರಿಯರ್ ಗಿಂತ ದೇಶದ ಭವಿಷ್ಯ ಮುಖ್ಯ ನನಗೆ ಎಂದು ಸಂವಾದ ಕಾರ್ಯಕ್ರಮದಲ್ಲಿ ಪ್ರಕಾಶ್​ ರೈ ಮಾತನಾಡಿದ್ದಾರೆ.

- Advertisement -

Related news

error: Content is protected !!