Monday, June 17, 2024
spot_imgspot_img
spot_imgspot_img

ತರೀಕೆರೆಯಲ್ಲಿ ಪೂರ್ವಭಾವಿ ಸಭೆ _ ಡಾ.ಧನಂಜಯ ಸರ್ಜಿಯನ್ನು ಗೆಲ್ಲಿಸುವಂತೆ ಕರೆ

- Advertisement -G L Acharya panikkar
- Advertisement -

ವಿಧಾನ ಪರಿಷತ್ ನೈರುತ್ಯ ಪದವಿಧರ ಮತ್ತು ನೈರುತ್ಯ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ತರೀಕೆರೆ ಮಂಡಲದ ವತಿಯಿಂದ ಇಲ್ಲಿನ ಅರಮನೆ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಮತ್ತು ಚುನಾವಣಾ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ತರೀಕೆರೆ ಮಂಡಲದ ಬಿಜೆಪಿ ವಾರ್ಡ್ ಅಧ್ಯಕ್ಷರು , ಬೂತ್ ಅಧ್ಯಕ್ಷರು, ಮಹಾಶಕ್ತಿ ಕೇಂದ್ರದ ಪ್ರಮುಖರಿಗೆ ಚುನಾವಣೆಯ ರೂಪುರೇಷೆಗಳನ್ನು ತಿಳಿಸಿ ತಮ್ಮ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳಲ್ಲಿ ಪದವೀಧರ ಮತದಾರರನ್ನು ತಲುಪಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರ ಪರವಾಗಿ ಮತಯಾಚಿಸಿ, ಗೆಲ್ಲಿಸುವಂತೆ ಮನವಿ ಮಾಡಲಾಯಿತು.

ಈ ವೇಳೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ವಿ. ಸುನಿಲ್ ಕುಮಾರ್, ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್ ದತ್ತಾತ್ರಿ , ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಡಿ. ಎಸ್. ಅರುಣ್, ಮಾಜಿ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಸುರೇಶ್, ತರೀಕೆರೆ ಮಂಡಲ ಅಧ್ಯಕ್ಷ ಪ್ರತಾಪ್ , ಮಾಜಿ ಶಾಸಕ ಎಸ್. ಎಂ. ನಾಗರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ನರೇಂದ್ರ, ಬಿಜೆಪಿ ಮುಖಂಡ ಧ್ರುವಕುಮಾರ್, ಕೆ. ಆನಂದಪ್ಪ, ಎ. ಸಿ. ಚಂದ್ರಪ್ಪ, ಮಂಜುನಾಥ್, ಜೆಡಿಎಸ್ ಮುಖಂಡ ಶಿವಾನಂದ, ಪದವೀಧರ ಕ್ಷೇತ್ರದ ತಾಲೂಕು ಸಂಚಾಲಕ ಶಶಿಕುಮಾರ್ , ಶಿಕ್ಷಕರ ಕ್ಷೇತ್ರದ ತಾಲೂಕು ಸಂಚಾಲಕ ಸೋಮಶೇಖರ್ , ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಆನಂದಪ್ಪ, ಬಿಜೆಪಿ ಮಾಜಿ ಜಿಲ್ಲಾ ಕಾರ್ಯದರ್ಶಿ ಅವಿನಾಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯಕೆ.ಎಚ್. ಮಹೇಂದ್ರ, ಜಿಲ್ಲಾ ಕಾರ್ಯದರ್ಶಿ ವಸಂತ್ ಕುಮಾರ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ , ಬಿಜೆಪಿ ಮುಖಂಡ ಕೃಷ್ಣ ಮೂರ್ತಿ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚೈತ್ರಶ್ರೀ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

- Advertisement -

Related news

error: Content is protected !!