- Advertisement -
- Advertisement -


ಬಂಟ್ವಾಳ: ಸ್ಕೂಟರ್ ಗೆ ರಿಕ್ಷಾ ಢಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ, ಸಹಸವಾರ ಯಾವುದೇ ಗಾಯವಿಲ್ಲದೆ ಪಾರಾದ ಘಟನೆ ಬಂಟ್ವಾಳ ಬಿಸಿರೋಡಿನ ಕೈಕಂಬ ಎಂಬಲ್ಲಿ ಆದಿತ್ಯವಾರ ನಡೆದಿದೆ.
ಗಾಯಗೊಂಡ ವ್ಯಕ್ತಿ ಬಿ.ಮೂಡ ಗ್ರಾಮದ ಗೋಳಿನೆಲ ನಿವಾಸಿ ಕೃಷ್ಣಪ್ಪ ಕುಲಾಲ್ ಎಮದು ಗುರುತಿಸಲಾಗಿದೆ. ಸಹಸವಾರ ಉಮೇಶ್ ಯಾವುದೇ ಗಾಯಗಳಾದೆ ಪಾರಾಗಿದ್ದಾರೆ.
ಮೊಡಂಕಾಪುವಿನಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ವೇಳೆ ಕೈಕಂಬ ಬಳಿಯ ರೈಲ್ವೆ ಓವರ್ ಬ್ರಿಡ್ಜ್ ಬಳಿ ವಿರುದ್ಧ ದಿಕ್ಕಿನಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ರಿಕ್ಷಾ ಬೈಕ್ ಗೆ ಢಿಕ್ಕಿಯಾಗಿದೆ. ಘಟನೆಯಿಂದ ಸವಾರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾದರೆ ಸಹಸವಾರ ಯಾವುದೇ ಗಂಭೀರವಾದ ಗಾಯವಿಲ್ಲದೆ ಪಾರಾಗಿದ್ದಾರೆ. ಈ ಬಗ್ಗೆ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Advertisement -








