Monday, June 8, 2026
spot_imgspot_img
spot_imgspot_img

ಕೃಷಿ ಮಾರುಕಟ್ಟೆ ಸುಧಾರಣೆಯಿಂದ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿದೆ; ರಾಷ್ಟ್ರಪತಿ ರಾಮನಾಥ್ ಕೋವಿಂದ್

- Advertisement -
- Advertisement -

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವರ್ಷದ ಸ್ವಾತಂತ್ರ್ಯೋತ್ಸವ ವಿಶೇಷವಾದುದು..ಈ ವರ್ಷದ ನಂತರ ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಿದ್ದೇವೆ ಎಂದರು.

ರಾಷ್ಟ್ರಪತಿ ಭಾಷಣದ ಮುಖ್ಯಾಂಶಗಳು..

  • ದೇಶದಲ್ಲಿ ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು..
  • ಇದು ನಮ್ಮೆಲ್ಲರಿಗೂ ಅತ್ಯಂತ ಸಂತಸದ ದಿನವಾಗಿದೆ. ನಮ್ಮ ಸ್ವಾತಂತ್ರ್ಯದ ಕನಸು ಅನೇಕ ತಲೆಮಾರುಗಳ ಪ್ರಸಿದ್ಧ ಮತ್ತು ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಮೂಲಕ ಸಾಕಾರಗೊಂಡಿದೆ. ಆ ಎಲ್ಲ ಅಮರ ಹೋರಾಟಗಾರರಿಗೆ ನನ್ನ ಗೌರವ ಸಲ್ಲಿಸುತ್ತೇನೆ.
  • ನಮ್ಮ ಕ್ರೀಡಾಪಟುಗಳು ಇತ್ತೀಚೆಗೆ ಮುಕ್ತಾಯಗೊಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ರಾಷ್ಟ್ರಕ್ಕೆ ಪ್ರಶಂಸೆಯನ್ನು ತಂದಿದ್ದಾರೆ.
  • ಹೆಣ್ಣುಮಕ್ಕಳು ಶಿಕ್ಷಣವನ್ನು ಪಡೆಯಲು ಮತ್ತು ಬೆಳೆಯಲು ಅವಕಾಶಗಳನ್ನು ಒದಗಿಸುವಂತೆ ನಾನು ಪ್ರತಿ ಪೋಷಕರನ್ನು ಕೋರುತ್ತೇನೆ.
  • ಸಾಂಕ್ರಾಮಿಕದ ತೀವ್ರತೆಯು ಕಡಿಮೆಯಾಗಿದ್ದರೂ, ಕೊರೊನಾ ವೈರಸ್‌ನ ಪ್ರಭಾವ ಇನ್ನೂ ಮುಗಿದಿಲ್ಲ. ಎಲ್ಲಾ ಅಪಾಯಗಳನ್ನು ತೆಗೆದುಕೊಳ್ಳುತ್ತಾ, ನಮ್ಮ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ಆಡಳಿತಗಾರರು ಮತ್ತು ಇತರ ಕೊರೊನಾ ಯೋಧರ ಪ್ರಯತ್ನದಿಂದ ಎರಡನೇ ಅಲೆಯ ಕೊರೊನಾವನ್ನು ನಿಯಂತ್ರಿಸಲಾಗುತ್ತಿದೆ.
  • ಸಾಧ್ಯವಾದಷ್ಟು ಬೇಗ ಪ್ರೋಟೋಕಾಲ್ ಪ್ರಕಾರ ಲಸಿಕೆ ಹಾಕಿಸಿಕೊಳ್ಳಲು ಮತ್ತು ಇತರರನ್ನು ಪ್ರೇರೇಪಿಸಲು ನಾನು ಎಲ್ಲಾ ದೇಶವಾಸಿಗಳನ್ನು ಕೋರುತ್ತೇನೆ.
  • ಒಂದು ವರ್ಷದ ಅವಧಿಯಲ್ಲಿ ವೈದ್ಯಕೀಯ ಸೌಲಭ್ಯಗಳ ವಿಸ್ತರಣೆಗಾಗಿ 23,220 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿರುವುದು ಸಂತಸದ ಸಂಗತಿಕೊರೊನಾ ಮಧ್ಯೆಯೂ ಗ್ರಾಮೀಣ ಪ್ರದೇಶಗಳಲ್ಲಿ- ವಿಶೇಷವಾಗಿ ಕೃಷಿಯಲ್ಲಿ ಬೆಳವಣಿಗೆ ಮುಂದುವರಿದಿರುವುದು ನನಗೆ ಸಂತೋಷವಾಗಿದೆ.
  • ಕೃಷಿ ಮಾರುಕಟ್ಟೆಯಲ್ಲಿ ಅನೇಕ ಸುಧಾರಣೆಯಾಗುವುದರಿಂದ, ನಮ್ಮ ಅನ್ನದಾತ ರೈತರು ಮತ್ತಷ್ಟು ಸಬಲರಾಗುತ್ತಾರೆ ಮತ್ತು ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತದೆ.
- Advertisement -

Related news

error: Content is protected !!