ವಿಟ್ಲ: ಮಾಹಿತಿ ಹಕ್ಕು ಅಧಿನಿಯಮ ೨೦೦೫ರ ಬಗ್ಗೆ ಕೇಳಲಾದ ಮಾಹಿತಿಗಳಿಗೆ ಜಿಲ್ಲೆಯ ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದರು.ಅವರು ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಜೀರು ಗ್ರಾಮದ ಬಳ್ಳೂರು ಲಚ್ಚಿಲ್ ಭೂತದ ವಾಲು ಎಂಬಲ್ಲಿಯ ರಸ್ತೆ ಅತಿಕ್ರಮಣವನ್ನು ತಹಶೀಲ್ದಾರ್ ಖುದ್ದಾಗಿ ತೆರವುಗೊಳಿಸುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದ್ದರೂ ತೆರವು ಮಾಡದೇ ಇರುವುದು ಮತ್ತು ತೆಗೆದುಕೊಂಡಿರುವ ಕ್ರಮದ ಬಗ್ಗೆ ಉತ್ತರಿಸದೇ ಇರುವ ಬಗ್ಗೆ ತಹಶೀಲ್ದಾರ್‌ರಲ್ಲಿ ಕೇಳಿದರೂ ಉತ್ತರ ಬಂದಿಲ್ಲ. ಕನ್ಯಾನ ಗ್ರಾಮದ ಎಲ್‌ಎನ್‌ಡಿಪಿಡಿಆರ್ ೮೮/೧೩-೧೪ ಮೊಜಿನಿ ಇತರೆ ೧೦೧/೧೩-೧೪ ಕಡತಕ್ಕೆ ಸಂಬಂಧಿಸಿದ ಮಾಹಿತಿ ಹಕ್ಕು ೨೦೦೫ರಂತೆ ಕೇಳಿಕೊಂಡಿದ್ದರೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ತಹಶೀಲ್ದಾರ್ ನೀಡಿಲ್ಲ.
. ಈ ಬಗ್ಗೆ ಕೆಲವು ವಿಚಾರಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ತಹಶೀಲ್ದಾರ್ ನೀಡದೇ ಇರುವ ಪ್ರಕರಣದಂತೆ ಸಹಾಯಕ ಆಯುಕ್ತರು ಹಾಗೂ ಮಾಹಿತಿ ಹಕ್ಕು ಅಧಿನಿಯಮ ೨೦೦೫ರಂತೆ ಮೇಲ್ಮನವಿ ಪ್ರಾಧಿಕಾರದ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರೂ ತಹಶೀಲ್ದಾರ್‌ಗೆ ನೋಟಸ್ ಜಾರಿ ಮಾಡಿದ್ದರೂ ಈ ಬಗ್ಗೆ ಯಾವುದೇ ನ್ಯಾಯವನ್ನು ನೀಡದೇ ಇರುವುದನ್ನು ಕಂಡಾಗ ದ.ಕ ಜಿಲ್ಲೆಯ ಕಂದಾಯ ಅಧಿಕಾರಿಗಳಿಗೆ ಮಾಹಿತಿ ಹಕ್ಕಿನ ಕಾಯ್ದೆಯ ಬಗ್ಗೆ ಯಾವುದೇ ಭಯ ಇಲ್ಲದಂತಿದೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಜಿಲ್ಲಾಧಿಕಾರಿ, ಸಹಾಯಕ ಉಪ ಆಯುಕ್ತರು ಮತ್ತು ತಹಶೀಲ್ದಾರ್ ಮಾಹಿತಿ ಹಕ್ಕು ಕಾಯ್ದೆಯ ಪೂರ್ತಿ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಯು, ತಾಲ್ಲೂಕು ಅಧ್ಯಕ್ಷ ಗಣೇಶ ಸೀಗೆಬಲ್ಲೆ ಉಪಸ್ಥಿತರಿದ್ದರು.