Sunday, May 19, 2024
spot_imgspot_img
spot_imgspot_img

3 ರಾಜ್ಯಗಳ ಸಿಎಂಗಳೊಂದಿಗೆ ಕೊರೊನಾ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಚರ್ಚೆ

- Advertisement -G L Acharya panikkar
- Advertisement -

ನವದೆಹಲಿ: ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ಹೆಚ್ಚಾಗಿರೋ ಹಿನ್ನೆಲೆ ಹಲವು ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳು ಮತ್ತೆ ಲಾಕ್​ಡೌನ್ ಮೊರೆ ಹೋಗಿವೆ. ಈ ಮಧ್ಯೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರು ರಾಜ್ಯಗಳ ಸಿಎಂಗಳಿಗೆ ಕರೆ ಮಾಡಿ ಅಲ್ಲಿನ ಕೊರೊನಾ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ.

ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಜೊತೆಗೆ ಮೋದಿ ಮಾತನಾಡಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಉದ್ದವ್ ಠಾಕ್ರೆ, ಕೋವಿನ್ ಆ್ಯಪ್​​ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಪ್ರತ್ಯೇಕ ಆ್ಯಪ್​​ ತಯಾರಿಕೆಗೆ ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದರು.

ವ್ಯಾಕ್ಸಿನ್ ಹಂಚಿಕೆಗೆ ಪ್ರತ್ಯೇಕ ಆ್ಯಪ್ ರಚಿಸಲಾಗಿದ್ದು, ಈ ಆ್ಯಪ್​​ ಬಳಕೆಗೆ ಅನುಮತಿ ನೀಡುವಂತೆ ಠಾಕ್ರೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಬಳಿಕ ಮೋದಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಹಿಮಾಚಲಪ್ರದೇಶ ಸಿಎಂ ಜೈರಾಮ್​ ಠಾಕೂರ್ ಅವರಿಗೂ ಪ್ರತ್ಯೇಕವಾಗಿ ಕರೆ ಮಾಡಿ, ಅಲ್ಲಿನ ಕೋವಿಡ್​ ಪರಿಸ್ಥಿತಿಯ ಕುರಿತು ಸಮಾಲೋಚನೆ ನಡೆಸಿದ್ದಾರೆ.

ಸಂಭಾಷಣೆ ಬಳಿಕ ಶಿವರಾಜ್ ಸಿಂಗ್ ಚೌಹಾಣ್​ ಟ್ವೀಟ್ ಮಾಡಿದ್ದು, ತಮ್ಮ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ಕ್ರಮೇಣವಾಗಿ ಕಡಿಮೆಯಾಗುತ್ತಿದೆ ಹಾಗೂ ಸೋಂಕಿತರು ಗುಣಮುಖರಾಗುತ್ತಿರುವುದು ಹೆಚ್ಚಾಗ್ತಿದೆ ಎಂದು ಪ್ರಧಾನಿಗೆ ತಿಳಿಸಿದ್ದಾಗಿ ಹೇಳಿದ್ದಾರೆ.

driving
- Advertisement -

Related news

error: Content is protected !!