Thursday, June 18, 2026
spot_imgspot_img
spot_imgspot_img

ಪಬ್​ನಲ್ಲಿ ಪಾಕಿಸ್ತಾನ ಪರ ಘೋಷಣೆ: ಇಬ್ಬರ ಬಂಧನ..!

- Advertisement -
- Advertisement -

ಪಾಕಿಸ್ತಾನ ಪರ ಘೋಷಣೆ ಕೂಗಿದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಜೆಪಿ ನಗರದ ಪಬ್‌ನಲ್ಲಿ ನಡೆದಿದೆ.

ಬಂಧಿತರನ್ನು ಆರೋಪದಡಿ ಗುರಪ್ಪನಪಾಳ್ಯ ನಿವಾಸಿಗಳಾದ ಇನಾಯತ್ ಉಲ್ಲಾಖಾನ್, ಸೈಯದ್ ಮುಬಾರಕ್‌ನ ಎಂದು ಗುರುತಿಸಲಾಗಿದೆ.

ಮೊನ್ನೆ ರಾತ್ರಿ ಪಾಕ್‌ ಪರ ಘೋಷಣೆ ಕೂಗಿದ ಆರೋಪದಡಿ ಆರೋಪಿಗಳನ್ನು ಬಂಧಿಸಲಾಗಿದೆ. ಮದ್ಯಪಾನದ ನಶೆಯಲ್ಲಿ ರಾತ್ರಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ-20 ಪಂದ್ಯದ ವೇಳೆ ಪಾಕ್‌ ಪರ ಘೋಷಣೆ ಕೂಗಿದ್ದಾರೆ.ಈ ವೇಳೆ ಅಲ್ಲೇ ಇದ್ದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಸಹ ಕಿಡಿಗೇಡಿಗಳು ಕೂಗಾಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜೆ.ಪಿ ನಗರ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!