Sunday, January 26, 2025
spot_imgspot_img
spot_imgspot_img

ವಿಟ್ಲ: ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರ ಶ್ರದ್ಧಾಂಜಲಿ ಸಭೆ

- Advertisement -
- Advertisement -

ವಿಟ್ಲ: ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಮನಮೋಹನ್ ಸಿಂಗ್ ರವರ ಶ್ರದ್ಧಾಂಜಲಿ ಸಭೆಯು ವಿಟ್ಲ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಹಾಗೂ ಮೌನ ಪ್ರಾರ್ಥನೆ ಮೂಲಕ ನುಡಿ ನಮನ ಸಲ್ಲಿಸಲಾಯಿತು. ನುಡಿ ನಮನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮುಹಮ್ಮದ್ ಮಾತನಾಡಿ ಮನಮೋಹನ್ ಸಿಂಗ್ ಅವರು ಉದ್ಯೋಗ ಖಾತರಿ, ಮಾಹಿತಿ ಹಕ್ಕು, ಆಹಾರ ಭದ್ರತೆ, ಶಿಕ್ಷಣ ಹಕ್ಕು ಕಾಯಿದೆ ಜಾರಿ ಮಾಡುವ ಮೂಲಕ ದೇಶವನ್ನು ವಿಶ್ವದಲ್ಲೇ ಗುರುತಿಸುವಂತೆ ಮಾಡಿದರು ,ಇಡೀ ವಿಶ್ವವೇ ಶ್ರೇಷ್ಠ ಆರ್ಥಿಕ ತಜ್ಞನನ್ನು ಕಳೆದುಕೊಂದಿದೆ ಎಂದರು.ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಡಾ.ರಾಜಾರಾಮ್ ಮಾತನಾಡಿ ಭಾರತವನ್ನು ಸಂಪತ್ ಭರಿತ ದೇಶವನ್ನಾಗಿ ಮಾಡಿದ ಕೀರ್ತಿ ಡಾ. ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ.ಅವರು ಜಗತ್ತು ಕಂಡ ಶ್ರೇಷ್ಠ ಜ್ಞಾನಿ, ಅವರ ಉಪದೇಶ, ಮಾರ್ಗದರ್ಶನ ದೇಶಕ್ಕೆ ಮಾತ್ರವಲ್ಲ ಜಗತ್ತಿಗೆ ಅಮೂಲ್ಯವಾಗಿತ್ತು ಎಂದರು.ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮಾತಾನಾಡಿ ಹಣಕಾಸು ಸಚಿವರಾಗಿದ್ದ ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ, ಪಿ.ವಿ ನರಸಿಂಹರಾವ್ ಅವರ ಸರ್ಕಾರ ಮಂಡಿಸಿದ 1991ರ ಬಜೆಟ್ ಭಾರತದ ಆರ್ಥಿಕತೆಗೆ ಹೊಸ ತಿರುವು ನೀಡಿತು. ಆ ಮೂಲಕ ಮನಮೋಹನ್ ಸಿಂಗ್ ಅವರು ಭಾರತವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ್ದರು ಎಂದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ ಮಾತನಾಡಿ ವಿಶ್ವವೇ ಆರ್ಥಿಕ ಬಿಕ್ಕಟಿನಲ್ಲಿದ್ದಾಗ ತಮ್ಮ ಉದಾರವಾದಿ ನೀತಿಗಳ ಮೂಲಕ ಜಾಗತೀಕರಣಕ್ಕೆ ದೇಶವನ್ನು ಸಜ್ಜುಗೊಳಿಸಿ ಭಾರತದ ಆರ್ಥಿಕತೆಯನ್ನು ಹಳಿಗೆ ತಂದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಸಮರ್ಥ ಅಡಳಿತ ಭಾರತದ ಅರ್ಥ ವ್ಯವಸ್ಥೆಗೆ ಮರುಜೀವ ನೀಡಿತ್ತು ಎಂದರು. ಸಂದರ್ಭದಲ್ಲಿ ದ ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂದಬೆಟ್ಟು,ದ ಕ ಜಿಲ್ಲಾ ಕಾಂಗ್ರೆಸ್ ಸದಸ್ಯರು ರಮಾನಾಥ್ ವಿಟ್ಲ,ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ ಕೊಲ್ಯ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ವಿಕೆಎಂ ಅಶ್ರಫ್, ಅಬ್ದುಲ್ ರಹಿಮಾನ್ ,ಪದ್ಮಿನಿ,ಲತಾವೇಣಿ ಅಶೋಕ್, ಇಕ್ಬಾಲ್ ಹೊನೆಸ್ಟ್,ಬ್ಲಾಕ್ ಮುಂಚಿಣಿ ಘಟಕದ ಅಧ್ಯಕ್ಷರುಗಳಾದ ಎಲ್ಯಣ್ಣ ಪೂಜಾರಿ,ಮೋಹನ್ ಗುರ್ಜಿನಡ್ಕ, ಕರೀಂ ಕುದ್ದುಪದವು ಪಕ್ಷದ ಪ್ರಮುಖರಾದ ಎಂ ಕೆ ಮುಸಾ,ಕೆ ಆದಂ ಉಪ್ಪಿನಂಗಡಿ,ಸೀತಾರಾಮ ಶೆಟ್ಟಿ ಅಳಿಕೆ,ಶ್ರೀಧರ ಶೆಟ್ಟಿ,ಅಬ್ದುಲ್ ನಾಸಿರ್ ಕೋಲ್ಪೆ,ಅಬ್ದುಲ್ ರಹಿಮಾನ್ ಕುರುಂಬಳ,ಯಂ ಸದಾಶಿವ ಶೆಟ್ಟಿ ಅಳಿಕೆ,ಅಶೋಕ್ ಪೂಜಾರಿ ಎನ್ ಎಸ್ ಡಿ,ಬಿ ವಲೇರಿಯನ್ ಮಾಡ್ತ, ಅಸ್ಮ ಉಮರ್,ಸೇವಿರಿನ್ ಥೋಮಸ್ ಕ್ರಾಸ್ತಾ,ಎಂ ಪ್ರಸಾದ್ ಶೆಟ್ಟಿ, ರವಿ ಉಕ್ಕುಡ,ಸಿ ಎಚ್ ಹಾರಿಸ್,ಜೋನ್ಸನ್ ಸಿಬಾ,ಅಬ್ಬು ನವಗ್ರಾಮ, ವಿಕೆಎಂ ಹಂಝ,ಇಬಾಸ್ ಮಾರ್ಟಿಸ್,ಸಂತೋಷ್ ಕುಮಾರ್,ಇಬ್ರಾಹಿಂ ಕೆದುಮೂಲೆ,ಪಿ ಅಶೋಕ,ಎಸ್ ಕೆ ಮೊಹಮ್ಮದ್,ಡಿಎಂ ರಶೀದ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!