Wednesday, June 24, 2026
spot_imgspot_img
spot_imgspot_img

ಪಡಿಬಾಗಿಲು: ಸಪರಿವಾರ ಶ್ರೀ ಧೂಮಾವತೀ ದೈವದ ಪುನಃ ಪ್ರತಿಷ್ಠಾ ಕಲಶೋತ್ಸವ

- Advertisement -
- Advertisement -

ಪಡಿಬಾಗಿಲು: ಕಾನ ಮನೆತನದ ಕುಲಪುರೋಹಿತರಾದ ಅಮೈ ಮನೆಯವರ ಹಿರಿತನದಲ್ಲಿ, ವೇ|| ಮೂ|| ಬ್ರಹ್ಮಶ್ರೀ ನಡಿಬೈಲು ಶಂಕರನಾರಾಯಣ ಭಟ್ಟರ ನೇತೃತ್ವದಲ್ಲಿ ಸಪರಿವಾರ ಶ್ರೀ ಧೂಮಾವತೀ ದೈವದ ಪುನಃ ಪ್ರತಿಷ್ಠಾ ಕಲಶೋತ್ಸವ ಕಾನ ಮೂವಾಜೆ ಮೂಲೆಯಲ್ಲಿ ನಡೆಯಿತು. ಬೆಳಗ್ಗೆ ಮಹಾಗಣಪತಿ ಹೋಮ ನಡೆದು ಕಲಶ ಪ್ರದಾನ ಹೋಮ ನಡೆಯಿತು. ಬಳಿಕ ಭಂಡಾರ ಗೃಹದಲ್ಲಿ ಶ್ರೀ ಧೂಮಾವತೀ ದೈವದ ಪುನಃ ಪ್ರತಿಷ್ಠಾ ಕಲಶಾಭಿಷೇಕ, ತಂಬಿಲ ಸೇವೆ ನಡೆಯಿತು.

ಬಳಿಕ ಉತ್ಸವ ಸ್ಥಾನದಲ್ಲಿ ಶ್ರೀ ಧೂಮಾವತಿ ದೈವದಪೀಠ ಪ್ರತಿಷ್ಠೆ ಹಾಗೂ ಕಲಶಾಭಿಷೇಕ, ಪೂಜಾ ತಂಬಿಲ, ನಿತ್ಯ ನೈಮಿತ್ತಿಕ ನಿರ್ಣಯ, ತಂಬಿಲ, ಮಂಗಳಾರತಿ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

- Advertisement -

Related news

error: Content is protected !!