Friday, June 26, 2026
spot_imgspot_img
spot_imgspot_img

ಸಹ್ಯಾದ್ರಿ ಫ್ರೆಂಡ್ಸ್‌ (ರಿ.) ಕೈಕಾರ ಆಶ್ರಯದಲ್ಲಿ 9ನೇ ವರ್ಷದ “ನಮ್ಮ ಕೈಕಾರಡ್‌ ಕೆಸರ್‌ಡೊಂಜಿ ದಿನ ಕಾರ್ಯಕ್ರಮದ ಉದ್ಘಾಟನೆ*

- Advertisement -
- Advertisement -

ಬಟ್ಯ ಕೊರಗರವರಿಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ

ಕೈಕಾರ: (ಆ.10) ಸಹ್ಯಾದ್ರಿ ಫ್ರೆಂಡ್ಸ್‌ (ರಿ.) ಕೈಕಾರ ಪುತ್ತೂರು ದ.ಕ. ಆಶ್ರಯದಲ್ಲಿ 9ನೇ ವರ್ಷದ “ನಮ್ಮ ಕೈಕಾರಡ್‌ ಕೆಸರ್‌ಡೊಂಜಿ ದಿನ” ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ಕೈಕಾರ ಪಳ್ಳತ್ತಾರು ಶ್ರೀ ಜೂಮಾದಿ ದೈವಸ್ಥಾನದ ಬಳಿ ಶ್ರೀಮತಿ ಸರಸ್ವತಿ ಹೊಸಲಕ್ಕೆ ಇವರ ಗದ್ದೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಬಟ್ಯ ಕೊರಗರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಕೆಸರು ಗದ್ದೆಯಲ್ಲಿ ಮಕ್ಕಳಿಗೆ ಮಹಿಳೆಯರಿಗೆ, ಪುರುಷರಿಗೆ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.

ಮಧ್ಯಾಹ್ನ ವಿಶೇಷ ಭೋಜನ ವ್ಯವಸ್ಥೆ ಏರ್ಪಡಿಸಲಾಗಿದೆ.ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮ ದಲ್ಲಿ ವಿವಿಧ ಕ್ಷೇತ್ರ ಕ್ಷೇತ್ರ ದಲ್ಲಿ ಸಾಧನೆ ಗೈದ ಸಾಧಕರಿಗೆ ಸೈಹಾದ್ರಿ ಸಿರಿ ಪ್ರಶಸ್ತಿ ಪ್ರಧಾನ ನಡೆಯಲಿದೆ.ಕಾರ್ಯಕ್ರಮದಲ್ಲಿ ಹಲವು ಗಣ್ಯಾತಿ ಗಣ್ಯರು ಸಹ್ಯಾದ್ರಿ ಫ್ರೆಂಡ್ಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!