Wednesday, November 25, 2026
spot_imgspot_img
spot_imgspot_img

ಗೌರವಧನ ಹೆಚ್ಚಳಕ್ಕೆ ಆಗ್ರಹ: ಫ್ರೀಡಂ ಪಾರ್ಕ್‌ನಲ್ಲಿ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

- Advertisement -
- Advertisement -

ಬೆಂಗಳೂರು: ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಇಕ್ಕಟ್ಟಿನಲ್ಲಿ ಈಗ ಬಿಸಿಯೂಟದ ನೌಕರರ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ತಟ್ಟಿದೆ. ಕ್ಲಸ್ಟರ್ ಕಿಚನ್‌ಗೆ ವಿರೋಧಿಸಿ ಬಿಸಿಯೂಟದ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಇಂದು ರಾಜ್ಯಾದ್ಯಂತ ಮಕ್ಕಳಿಗೆ ಬಿಸಿಯೂಟ ಸಿಗಲ್ಲ.

ಒಂದೆಡೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಬಿಸಿಯೂಟ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಗೌರವಧನ ಹೆಚ್ಚಳಕ್ಕೆ ಬಿಸಿಯೂಟ ನೌಕರರು ಬೇಡಿಕೆ ಇಟ್ಟಿದ್ದಾರೆ. ತಿಂಗಳಿಗೆ 4 ಸಾವಿರ ಸಂಬಳ ಇದೆ. ಗೌರವಧನ 15 ಸಾವಿರಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್ ರಸ್ತೆಯಲ್ಲಿ ಅನಿರ್ಧಿಷ್ಟವಾಧಿ ಮುಷ್ಕರ ನಡೆಸುತ್ತಿದ್ದಾರೆ. ಅಲ್ಲದೇ ಕ್ಲಸ್ಟರ್ ಕಿಚನ್ ಪ್ರಸ್ತಾಪವನ್ನು ಸರ್ಕಾರ ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಸೇರಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. 25 ವರ್ಷಗಳಿಂದ ಇದೇ ಸಂಬಳಕ್ಕೆ ಕೆಲಸ ಮಾಡುತ್ತಿದ್ದೇವೆ. ರಾಜ್ಯಾದ್ಯಂತ 1.60 ಲಕ್ಷ ಜನ ಬಿಸಿಯೂಟ ಕಾರ್ಯಕರ್ತೆಯರು ಇದ್ದೇವೆ. ನಮ್ಮ ಕೆಲಸಕ್ಕೆ ಈಗ ಕುತ್ತು ಬಂದಿದೆ. ಮನೆಯಲ್ಲಿ ಊಟ ಹೇಗಿರುತ್ತೋ ಹಾಗೇ ಮಕ್ಕಳಿಗೆ ಊಟ ಕೊಡುತ್ತೇವೆ. ಅದನ್ನ ಕಿತ್ತು ಎನ್‌ಜಿಓಗಳಿಗೆ, ಸಂಘಟನೆಗಳಿಗೆ ನೀಡಿ ಕ್ಲಸ್ಟರ್‌ಗಳನ್ನ ನಿರ್ಮಿಸಿದ್ರೆ ನಮ್ಮ ಗತಿ ಏನು? ನಮಗೆ ಬೇರೆ ಯಾರು ಈಗ ಕೆಲಸ ಕೊಡುತ್ತಾರೆ? ನಾವೆಲ್ಲಿಗೆ ಹೋಗಬೇಕು? ನಮಗೆ ಕೆಲಸದ ಭದ್ರತೆ ಕೊಡಿ. ಇಲ್ಲವಾದ್ರೆ ನಾವು ಆಶಾ ಕಾರ್ಯಕರ್ತೆಯರಂತೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ 1.60 ಲಕ್ಷ ಬಿಸಿಯೂಟ ಕಾರ್ಯಕರ್ತೆಯರಿದ್ದಾರೆ. ಎಲ್ಲರಿಗೂ ಗೌರವಧನ ಹೆಚ್ಚಿಸುವಂತೆ ನೌಕರರು ಒತ್ತಾಯಿಸಿದ್ದಾರೆ.

ಕೊಡುವ ವೇತನವೂ ಕಡಿಮೆ. ಕಡಿಮೆ ವೇತನ ಇದ್ರೂ ಕೆಲವರನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ. ಹೀಗಾದರೆ ಜೀವನ ನಿರ್ವಹಣೆ ಕಷ್ಟ ಇದೆ ಎಂದು ಬಿಸಿಯೂಟ ಕಾರ್ಯಕರ್ತೆಯರು ಕಣ್ಣೀರಿಟ್ಟಿದ್ದಾರೆ.

- Advertisement -

Related news

error: Content is protected !!