Tuesday, July 1, 2025
spot_imgspot_img
spot_imgspot_img

ಬೆಳ್ತಂಗಡಿ: (ಜ. 6) ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

- Advertisement -
- Advertisement -

ಬೆಳ್ತಂಗಡಿ: ನೇತ್ರಾವತಿಯ ಉಪನದಿ ಮೃತ್ಯುಂಜಯ ನದಿಗೆ ಗೋವಿನ ತಲೆ,ಮೃತದೇಹ, ಚರ್ಮ, ಮೂಳೆ ಮೊದಲಾದ ಅವಶೇಷಗಳನ್ನು ಎಸೆದ ಘಟನೆಯನ್ನು ಖಂಡಿಸಿ ವಿಹಿಂಪ ಮತ್ತು ಬಜರಂಗ ದಳದವರು ಜ. 6ರಂದು ಕಕ್ಕಿಂಜೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಅನ್ನಾರು ಸೇತುವೆ ಬಳಿ ಮೃತ್ಯುಂಜಯ ನದಿಗೆ ಡಿ.17ರಂದು ಕಿಡಿಗೇಡಿಗಳು 11 ಗೋಣಿ ಚೀಲಗಳಲ್ಲಿ ಗೋಮಾಂಸದ ಅವಶೇಷ ಹಾಗೂ ಕರುವಿನ ಮೃತದೇಹವನ್ನು ಎಸೆದಿರುವುದು ಕಂಡುಬಂದಿತ್ತು. ಈ ಬಳಿಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಬೃಹತ್ ಹೋರಾಟಕ್ಕೆ ಕರೆಕೊಟ್ಟಿದ್ದಾರೆ.  ಈ ಕುರಿತು ಬಜರಂಗದಳ ತಾಲೂಕು ಅಧ್ಯಕ್ಷ ದಿನೇಶ್‌ ಚಾರ್ಮಾಡಿ ಮಾತನಾಡಿ ಡಿ. 30ರಂದು ಕಕ್ಕಿಂಜೆಯಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಒಂದು ವಾರದೊಳಗೆ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಪೊಲೀಸ್‌ ಇಲಾಖೆ ತಿಳಿಸಿದ್ದ ಕಾರಣ ಮುಂದೂಡಲಾಗಿತ್ತು. ಇದೀಗ ಆರೋಪಿಗಳ ಬಂಧನದ ಉಜಿರೆಯ ಶಾರದಾ ಮಂಟಪದಲ್ಲಿ ಜರಗಿದ ಸಭೆಯಲ್ಲಿ ಹಿಂದೂ ಸಂಘಟನೆಗಳು ಭಾಗವಹಿಸಿ ಜ.6ರಂದು ಕಕ್ಕಿಂಜೆಯಲ್ಲಿ ನಡೆಯಲಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿವೆ ಎಂದು ತಿಳಿಸಿದ್ದಾರೆ.ಅಲ್ಲದೆ ನದಿ ಪರಿಸರದಲ್ಲಿ ಧರ್ಮಸ್ಥಳ, ಪಜಿರಡ್ಕ ಸಹಿತ ಅನೇಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿದ್ದು, ಅವುಗಳನ್ನು ಅಪವಿತ್ರಗೊಳಿಸುವ ಹುನ್ನಾರ ಇದರ ಹಿಂದಿದೆ. ಜತೆಗೆ ಪ್ರತಿನಿತ್ಯ ಅಯ್ಯಪ್ಪ ವ್ರತಧಾರಿಗಳು ಸ್ನಾನಕ್ಕೆ ಬರುವಂಥ ಜಾಗದಲ್ಲೇ ಉದ್ದೇಶಪೂರ್ವಕ ವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ದಸ್ತಗಿರಿ ಮಾಡಿದ್ದಾರೆ. ಬೆಳ್ತಂಗಡಿಯ ಆದಂ ಅವರ ಮಗ ಮಹಮ್ಮದ್ ಇರ್ಷಾದ್ (28 ವರ್ಷ), ರವೂಫ್‌ ಅವರ ಮಗ ಮಹಮ್ಮದ್ ಅಜ್ಮಲ್ (30 ವರ್ಷ) ಆರೋಪಿಗಳನ್ನು ಬಂಧನ ಮಾಡಲಾಗಿದೆ. ಇವರ ಮೇಲೆ ಪೊಲೀಸರು ಠಾಣಾ ಅಕ್ರ 79/2024 ಕಲಂ 4, 12 ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

- Advertisement -

Related news

error: Content is protected !!