Monday, June 22, 2026
spot_imgspot_img
spot_imgspot_img

PSI ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮ; ಪರೀಕ್ಷೆಗೆ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಉತ್ತರ ಹೇಳಿಕೊಡುವ ವಿಡಿಯೋ ವೈರಲ್.!

- Advertisement -
- Advertisement -

ಈಗಾಗಲೇ ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಯಲಾಗಿದ್ದು, ಸದ್ಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಉತ್ತರ ಹೇಳಿಕೊಡುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಆರೋಪಿಗಳು ಪರೀಕ್ಷೆಯಲ್ಲಿ ಉತ್ತರ ಹೇಳಿಕೊಡುತ್ತಿದ್ದರು. ರಹಸ್ಯ ಸ್ಥಳದಲ್ಲಿ ಕೂತು ಉತ್ತರ ಹೇಳುತ್ತಿದ್ದರು.

ವಿಡಿಯೋದಲ್ಲಿರುವ ವ್ಯಕ್ತಿ ಯಾರು? ಯಾವ ಪರೀಕ್ಷೆಗೆ ಉತ್ತರ ಹೇಳುತ್ತಿದ್ದ ಅನ್ನೋದು ಇನ್ನು ತಿಳಿದು ಬಂದಿಲ್ಲ. ಇನ್ನು ಉತ್ತರ ಹೇಳುವ ವ್ಯಕ್ತಿಗೆ ಪ್ರಶ್ನೆ ಪತ್ರಿಕೆ ಸಿಕ್ಕಿದ್ದು ಹೇಗೆ? ಅವಧಿಗೂ ಮೊದಲೇ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ವಿಡಿಯೋ ಬಗ್ಗೆ ತನಿಖೆಮಾಡಿದರೆ ಮತ್ತೊಂದು ಪರೀಕ್ಷೆಯ ಅಕ್ರಮ ಹೊರಬೀಳುವ ಸಾಧ್ಯತೆಯಿದೆ. ಇದು ಸುಮಾರು ಎಂಟು ತಿಂಗಳ ಹಿಂದಿನ ವಿಡಿಯೋ ಇದಾಗಿದ್ದು , ಎಫ್ ಡಿಎ ಪರೀಕ್ಷೆ ಸಮಯದಲ್ಲಿ ನಡೆದಿದೆ ಅಂತ ಹೇ ಳಲಾಗುತ್ತಿದೆ.

- Advertisement -

Related news

error: Content is protected !!