- Advertisement -
- Advertisement -
ಉಪ್ಪಿನಂಗಡಿ: ಮಂಗಳೂರಿನಲ್ಲಿ ಪಬ್ ಜಿ ಮಾದರಿಯ ಗೇಮ್ ಸಂಬಂಧಿಸಿದಂತೆ ಬಾಲಕ ಕೊಲೆ ನಡೆದ ಬಳಿಕ ಇದೀಗ ಉಪ್ಪಿನಂಗಡಿಯಲ್ಲೂ ಪಬ್ ಜಿ ಯ ಸದ್ದು ಕೇಳಿಬಂದಿದೆ. ಪ್ರೌಢ ಶಾಲಾ ವಿದ್ಯಾರ್ಥಿಯೊಬ್ಬ ಅದೇ ಮಾದರಿಯ ಗೇಮ್ ಆಡಿ ತಲೆಗೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡಿರುವ ಘಟನೆ ನಡೆದಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಖಾಸಗಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ತಲೆಕೂದಲು ವಿಕಾರವಾಗಿ ಕತ್ತರಿಸಿರುವುದನ್ನು ಹೆತ್ತವರು ಗಮನಿಸಿ ಪ್ರಶ್ನಿಸಿದಾಗ ಮೊದಲಿಗೆ ಬೇರೆ ಹುಡುಗರು ಬಲವಂತದಿಂದ ಮಾಡಿದ್ದಾರೆ ಎಂದು ಹೇಳಿದ್ದ.

ಈ ಬಗ್ಗೆ ಮತ್ತಷ್ಟು ವಿಚಾರಿಸಿ ಸುಳ್ಳು ಹೇಳುತ್ತಿದ್ದಾನೆ ಎಂಬ ಅನುಮಾನ ಬಂದಾಗ , ತಾನು ಆನ್ ಲೈನ್ ನಲ್ಲಿ ಆಟ ಆಡುತ್ತಾ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ. ಇದರಿಂದ ಭಯಗೊಂಡು ಕಂಗಾಲಾದ ಪೋಷಕರು ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಬಾಲಕನ ಸಹವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


- Advertisement -