Tuesday, July 28, 2026
spot_imgspot_img
spot_imgspot_img

ಸಾರ್ವಜನಿಕವಾಗಿ ಮದ್ಯ ಸೇವಿಸುತ್ತಿದ್ದ ಮದ್ಯ ವ್ಯಸನಿಗಳ ಬಂಧನ!!!

- Advertisement -
- Advertisement -

ವಿಟ್ಲ: ಗೂಡಂಗಡಿ ಮುಂಭಾಗದಲ್ಲಿ ಮದ್ಯ ಕುಡಿಯುತ್ತಿದ್ದ ಕೊಡಂಗೆ ನಿವಾಸಿ ರಾಧಾಕೃಷ್ಣ (೫೬), ಅವತ್ತಿಕಲ್ಲು ನಿವಾಸಿ ಶಾಂತರಾಜ ಶೆಟ್ಟಿ (೫೦) ಅವರನ್ನು ವಿಟ್ಲ ಎಸೈ ವಿನೋದ್ ರೆಡ್ಡಿ ಬಂಧಿಸಿದ ಘಟನೆ ಮಂಗಲಪದವು ಜಂಕ್ಷನ್ ಬಳಿ ನಡೆದಿದೆ.

ಮಂಗಲಪದವು ಗೂಡಂಗಡಿಯ ಮುಂದೆ ಮದ್ಯವನ್ನು ಕುಡಿಯುತ್ತಾರೆ ಎಂಬುದಾಗಿ ಖಚಿತ ಮಾಹಿತಿ ಮೇರೆಗೆ ಉಪನಿರೀಕ್ಷಕರು, ಸಿಬ್ಬಂದಿಗಳು ಸ್ಥಳಕ್ಕೆ ತೆರಳುತ್ತಿದ್ದಂತೆ ಇಬ್ಬರು ಪ್ಲಾಸ್ಟಿಕ್ ಲೋಟಗಳಲ್ಲಿ ಮದ್ಯವನ್ನು ಕುಡಿಯುವುದನ್ನು ಕಂಡು ಹಿಡಿಯಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡಿದ್ದರು.

ಮಾಲೀಕರಲ್ಲಿ ವಿಚಾರಿಸಿದಾಗ ಬೇರೆ ಕಡೆಯಿಂದ ಮದ್ಯದ ಪ್ಯಾಕೇಟ್‌ಗಳನ್ನು ತಂದು ಗೂಡಅಂಗಡಿಯ ಮುಂದೆ ಕುಡಿದಿರುವುದಾಗಿ ಹೇಳಿದ್ದಾರೆನ್ನಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!