Friday, June 5, 2026
spot_imgspot_img
spot_imgspot_img

ಪಂಪ್‌ವೆಲ್‌ ಲಾಡ್ಜ್‌ನಲ್ಲಿ ನಗ್ನ ಮೃತದೇಹ ಪತ್ತೆ; ಕೊಠಡಿಗೆ ಬಂದಿದ್ದ ಬುರ್ಖಾಧಾರಿ ಮಹಿಳೆ ಬಗ್ಗೆ ಶಂಕೆ

- Advertisement -
- Advertisement -

ಮಂಗಳೂರು: ನಗರದ ಪಂಪ್‌ವೆಲ್ ವೃತ್ತದ ಬಳಿಯ ಲಾಡ್ಜ್ ಒಂದರಲ್ಲಿ ಮಧ್ಯವಯಸ್ಕ ವ್ಯಕ್ತಿಯ ಮೃತದೇಹ ಸಂಶಯಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಗ್ನವಾಗಿ ಮೃತಪಟ್ಟ ಸ್ಥಿತಿಯಲ್ಲಿ ಶವ ಕಂಡುಬಂದಿದ್ದರಿಂದ ಸಂಶಯ ವ್ಯಕ್ತವಾಗಿದೆ.

ಪಂಪ್‌ವೆಲ್‌ನಲ್ಲಿರುವ ಪದ್ಯಶ್ರೀ ಲಾಡ್ಜ್ ನಲ್ಲಿ ಶವ ಪತ್ತೆಯಾಗಿದ್ದು, ಅಲ್ಲಿ ಸಿಕ್ಕಿರುವ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಕಾಸರಗೋಡು ಜಿಲ್ಲೆಯ ಪೈವಳಿಕೆ ನಿವಾಸಿ ಅಬ್ದುಲ್ ಕರೀಂ ಎಂದು ಪತ್ತೆ ಮಾಡಲಾಗಿದೆ. ಡಿಎಲ್ ಪ್ರಕಾರ, ವ್ಯಕ್ತಿಯ ವಯಸ್ಸು 56 ಆಗಿರುತ್ತದೆ. ಇವರು ಉಳಿದುಕೊಂಡಿದ್ದ ಲಾಡ್ಜ್ ಗೆ ಯಾರೋ ಬುರ್ಖಾ ಧರಿಸಿದ ಮಹಿಳೆ ಬಂದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಅಲ್ಲದೆ, ಕೊಠಡಿಯ ಒಳಗೆ ಕೆಲವು ಆಯುರ್ವೇದಿಕ್ ಟ್ಯಾಬ್ಲೆಟ್ ಕೂಡ ಪತ್ತೆಯಾಗಿದೆ ಮಹಿಳೆಯ ಜೊತೆಗೆ ಲೈಂಗಿಕ ಸಂಪರ್ಕದ ಬಳಿಕ ಹೃದಯಾಘಾತ ಆಗಿದೆಯೇ, ಸಾವಿಗೆ ಬೇರೆ ಏನಾದ್ರೂ ಕಾರಣ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಯಬೇಕಾಗಿದೆ. ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸ್‌ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!