Sunday, June 14, 2026
spot_imgspot_img
spot_imgspot_img

ಪುಣಚ: ಸೇತುವೆ ಕಾಮಗಾರಿ ವೇಳೆ ಕಾರ್ಮಿಕರು ಜಖಂ; ಜಾತಿ, ಧರ್ಮ, ಭೇದ ಮರೆತು ಉತ್ತರ ಭಾರತ ಮೂಲದ ಕಾರ್ಮಿಕರನ್ನು ರಕ್ಷಿಸಿದ ಸ್ಥಳೀಯರು

- Advertisement -
- Advertisement -

ಪುಣಚ: ಸೇತುವೆ ಕಾಮಾಗಾರಿ ವೇಳೆ ಕಾಂಗ್ರೆಟ್ ಬೀಮ್ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ಪುಣಚ ಗ್ರಾಮದ ಬರೆಂಜ ಎಂಬಲ್ಲಿ ನಡೆದಿದ್ದು, ಈ ವೇಳೆ ಆರು ಮಂದಿ ಕಾರ್ಮಿಕರಿಗೆ ಗಾಯಗಳಾಗಿದೆ. ಈ ಪೈಕಿ ಓರ್ವ ಕಾರ್ಮಿಕ ಸುಮಾರು ಒಂದು ಗಂಟೆಗಳ ಕಾಲ ಸಿಲುಕಿಕೊಂಡು ನರಳಾಡುತ್ತಿದ್ದನು. ಗಂಭೀರ ಗಾಯಗೊಂಡಿದ್ದ ಕಾರ್ಮಿಕನ ನರಳಾಟಕ್ಕೆ ಕೂಡಲೇ ಸ್ಪಂದಿಸಿದ ಸ್ಥಳೀಯರು ಜಾತಿ, ಧರ್ಮ, ಬೇಧ ಮರೆತು ಉತ್ತರ ಭಾರತ ಮೂಲದ ಕಾರ್ಮಿಕರನ್ನು ಮೇಲಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳು ಉತ್ತರ ಭಾರತ ಮೂಲದವರು ಎಂದು ತಿಳಿದುಬಂದಿದೆ.

ಕಾಂಗ್ರೆಟ್ ಬೀಮ್‌ನ ಒಳಗೆ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ರಕ್ಷಿಸುವಲ್ಲಿ ಮಹೇಶ್ ಶೆಟ್ಟಿ ಬೈಲುಗುತ್ತು,ಮೋಹನ ಹಿತ್ತಿಲು, ಉಬೈದ್ ಗರಡಿ, ಯತಿನ್ ಗರಡಿ, ಹನೀಪ್ ಗರಡಿ, ಜಗದೀಶ್‌ ಚನಿಲ, ಮೌರಿಸ್ ಕೋಡಿ, ತೌಸಿರ್‍ ಗರಡಿ, ಬಶೀರ್‍ ಮಾಳಿಗೆ, ಲಿಯೋ ಡಿಸೋಜ, ಅವಿನಾಶ್ ರೈ, ದೀಪಕ್ ರೈ, ಅರ್ಲ್ಬಟ್ ಡಿಸೋಜ, ಬಾಲಕೃಷ್ಣ ನಾಯ್ಕ, ಹಾಗೂ ಅನೇಕ ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಇವರ ಈ ರಕ್ಷಣಾ ಕಾರ್ಯ ವೈಖರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

- Advertisement -

Related news

error: Content is protected !!