Saturday, April 20, 2024
spot_imgspot_img
spot_imgspot_img

ಕಾಣಿಕೆ ಡಬ್ಬಿ ಕದ್ದ ತಾರನಾಥ್ ಮೋಹನನ್ನು ಡಿಸೆಂಬರ್‌ನಲ್ಲಿ ಉಚ್ಚಾಟನೆ; ಬಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಸ್ಪಷ್ಟನೆ

- Advertisement -G L Acharya panikkar
- Advertisement -

ಮಂಗಳೂರು: ಹಿಂದೂ ಸಂಘಟನೆಯ ಸೋಗಿನಲ್ಲಿದ್ದ ಕಳ್ಳನನ್ನು ಮೊಂಟೆಪದವಿನ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಹಿಂದೂ ಸಂಘಟನೆಯ ಮುಖಂಡ ತಾರನಾಥ ಯಾನೆ ಮೋಹನ ಎಂದು ಗುರುತಿಸಲಾಗಿದೆ. ಈ ಸಂಬಂಧ ಹಿಂದೂ ಪರಿಷತ್ ಸಂಘಟನೆಯ ಮುಖಂಡ ಪುನೀತ್ ಅತ್ತಾವರ ಸ್ಪಷ್ಟೀಕರಣ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಳ್ಳಾಲ ಗ್ರಾಮಾಂತರ ಪ್ರಖಂಡ ಶಾರದಾ ನಗರ ಮೊಂಟೆಪದವು ಘಟಕ ಉದ್ಘಾಟನಾ ಸಮಯದಲ್ಲಿ ಬಜರಂಗದಳದ ಸಂಚಾಲಕನಾಗಿ ಆಯ್ಕೆಯಾಗಿದ್ದು ಕಳೆದ ಡಿಸೆಂಬರ್‌ನಲ್ಲಿ ಸಮಾಜ ಬಾಹಿರ ಕೃತ್ಯದಲ್ಲಿ ಭಾಗಿಯಾಗಿರುವುದು ಸಂಘಟನೆಯ ಗಮನಕ್ಕೆ ಬಂದ ಕೂಡಲೇ ಈತನನ್ನು ಸಂಘಟನೆಯಿಂದ ಉಚ್ಛಾಟನೆ ಮಾಡಲಾಗಿದೆ. ಈತನಿಗೆ ಸಂಘಟನೆಯ ಯಾವುದೇ ಜವಾಬ್ದಾರಿ ಇಲ್ಲ. ಆದುದರಿಂದ ಈತ ಎಸಗಿದ ಕೃತ್ಯಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಬಜರಂಗದಳದ ಜಿಲ್ಲಾ ಸಂಚಾಲಕರಾದ ಪುನೀತ್ ಅತ್ತಾವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಈ ಹಿಂದೆಯೇ ಸಂಘಟನೆಯಿಂದ ಉಚ್ಛಾಟನೆ ಮಾಡಲಾಗಿತ್ತು. ಆ ಬಳಿಕ ಸುಮಾರು 2 ತಿಂಗಳಿನಿAದ ತಲೆ ಮರೆಸಿಕೊಂಡಿದ್ದ ಆರೋಪಿ ತನ್ನ ಕೃತ್ಯವನ್ನು ಮತ್ತೆ ಮುಂದುವರಿಸಿದ್ದಾನೆ. ಆದರೆ ಮೊಂಟೆಪದವಿನಲ್ಲಿ ಕಳ್ಳತನ ಮಾಡಲು ಮುಂದಾದಾಗ ನಾಗರೀಕರ ಬಲೆಗೆ ಬಿದ್ದಿದ್ದಾನೆ. ಈತನನ್ನು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.

- Advertisement -

Related news

error: Content is protected !!