- Advertisement -
- Advertisement -



ಕೆಲ ಸಮಯಗಳ ಹಿಂದೆ ಪುತ್ತಿಲ ಪರಿವಾರ ವಿಟ್ಲ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಪುತ್ತಿಲ ಪರಿವಾರದ ಪ್ರಮುಖರಾಗಿ ಗುರುತಿಸಿ ಕೊಂಡಿದ್ದ ಪ್ರಸ್ತುತ ಪುತ್ತೂರು ಬಿಜೆಪಿ ಮಂಡಲ ಓಬಿಸಿ ಕಾರ್ಯದರ್ಶಿ ಹರೀಶ್ ಮರುವಾಳ ಎಂಬವರು “ಪುತ್ತಿಲ ಪರಿವಾರವನ್ನು ಅಲಕ್ಕ ಲಗಾಡಿ ತೆರೆಯಲು ಹೊರಟ್ಟಿದ್ದ ನಮ್ಮ ಪ್ರೀತಿಯ ವಕೀಲರಾದ ಶಿವಾನಂದ ಮಡಿವಾಳ ಇವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಅವರ ಫೋಟೋ ಸಮೇತ ಹಾಕಿದ ಹಾಕಿದ ವಿಚಾರ ವೈರಲ್ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ವಕೀಲರಾದ ಎಂ ಶಿವಾನಂದರವರು ವಿಟ್ಲ ಠಾಣೆಯಲ್ಲಿ ದೂರು ನೀಡಿ, ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಹರೀಶ್ ಮರುವಾಳ ಎಂಬವರು ತೆರೆದ ನ್ಯಾಯಾಲಯದಲ್ಲಿ ಕ್ಷಮೆಯಾಚನೆ ಕೋರಿ ಅಫಿದಾವಿತ್ ಸಲ್ಲಿಸಿ ನ್ಯಾಯಾಲಯದಲ್ಲಿ ಕ್ಷಮೆಯಾಚಿಸಿದ್ದಾರೆ.
ಆರೋಪಿಯು ಗೌರವಾನ್ವಿತ ನ್ಯಾಯಾಲಯದಲ್ಲಿ ಹಾಜರಾಗಿ ತನ್ನ ತಪ್ಪಿನ ಮತ್ತು ಅಪರಾದದ ಬಗ್ಗೆ ಕ್ಷಮೆ ಕೇಳುವ ಅಫಿದಾವಿತ್ ಸಲ್ಲಿಸುತ್ತಿದ್ದರಿಂದ ದೂರುದಾರರಾದ ಎಂ ಶಿವಾನಂದರವರು ಈ ಕೇಸನ್ನು ಹಿಂಪಡೆದಿದ್ದಾರೆ.
- Advertisement -