Tuesday, May 7, 2024
spot_imgspot_img
spot_imgspot_img

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ MNG ಫೌಂಡೇಶನ್ ಮತ್ತು ಇ ಫ್ರೇಂಡ್ಸ್ ಪುತ್ತೂರು ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ

- Advertisement -G L Acharya panikkar
- Advertisement -

ಪುತ್ತೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ, MNG ಫೌಂಡೇಶನ್ ಮತ್ತು ಇ ಫ್ರೇಂಡ್ಸ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಪುತ್ತೂರು,ಲಯನ್ಸ್ ಕ್ಲಬ್ ಪುತ್ತೂರು ಕಾವು,ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಇದರ ಸಹಭಾಗಿತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಯೋಗದೊಂದಿಗೆ ಮರ್ಹೂಂ ಯುನಿಟಿ ಹಸನ್ ಹಾಜಿ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 06 ಡಿಸೆಂಬರ್ 2020ನೇ ಆದಿತ್ಯವಾರದಂದು ಲಯನ್ಸ್ ಸೇವಾ ಕೇಂದ್ರ ಪುತ್ತೂರು ಇದರ ಸಭಾಂಗಣದಲ್ಲಿ ನಡೆಯಿತು.

ಮರ್ಹೂಂ ಯುನಿಟಿ ಹಸನ್ ಹಾಜಿಯವರ ಮಗ ಯುವ ಉದ್ಯಮಿ ಸಮೀರ್ ಯುನಿಟಿಯವರು ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ರಕ್ತದಾನ ಮಾಡುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ಹೇಮನಾಥ್ ಶೆಟ್ಟಿ ಕಾವು (ಪ್ರಾಂಥೀಯ ವಲಯಾಧ್ಯಕ್ಷರು, ಸ್ಥಾಪಕಾಧ್ಯಕ್ಷರು ಲಯನ್ಸ್ ಕ್ಲಬ್ ಪುತ್ತೂರು ಕಾವು) ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಜನಾಬ್: ರಿಯಾಝ್ ಪರಂಗಿಪೇಟೆ (ಗೌರವಾಧ್ಯಕ್ಷರು ಡೌರಿ ಫ್ರೀ ನಿಖಾಹ್ ಹೆಲ್ಪ್ ಲೈನ್, ರಾಷ್ಟ್ರೀಯ ಸಮೀತಿ ಸದಸ್ಯರು SDPI) ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮುನೀರ್, ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ,ಕೇಶವ ನಾಯ್ಕ್, ರಮೇಶ್ ರೈ, ನವೀನ್ ರೈ ಚೆಲ್ಯಡ್ಕ, ಡಾ.ಇಸ್ಮಾಯಿಲ್ ಸರ್ಫ್ರಾಝ್ ಅಹ್ಮದ್, ಸಾಬಿತ್ ಕುಂಬ್ರ,ಡಾ.ನಝೀರ್ ಅಹ್ಮದ್, ರಂಜಿತ್ ಬಂಗೇರ, ಯು.ಟಿ ತೌಸೀಫ್,ಎಂ.ಎಂ ಮೋನು ನಂದಾವರ,ರಫೀಕ್ ಬಾಂಬೆ,ಸಮೀರ್ ಯುನಿಟಿ,A1 ರಿಯಾಝ್, ಸಂಶುದ್ದೀನ್ ಪರ್ಲಡ್ಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಮತ್ತು ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಕಾಶ್ ಬಾಂಬಿಲ ಸ್ವಾಗತಿಸಿದರು. ಸಿದ್ದೀಕ್ ಬೀಟಿಗೆ ಕಾರ್ಯಕ್ರಮವನ್ನು ನಿರೂಪಿಸಿದರು. ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 55 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

- Advertisement -

Related news

error: Content is protected !!