Saturday, May 4, 2024
spot_imgspot_img
spot_imgspot_img

ಪುತ್ತೂರು: ಕ್ಯಾಂಪ್ಕೋ ಇನ್ ಸೇವಾ ವತಿಯಿಂದ ಮನೆಯ ನಿರ್ಮಾಣಕ್ಕೆ ಸಹಾಯಹಸ್ತ

- Advertisement -G L Acharya panikkar
- Advertisement -

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮಂದಾರಬೈಲಿನ ಅನಾರೋಗ್ಯ ಪೀಡಿತ ಪ್ರಕಾಶ್ ಪೂಜಾರಿಯವರ ಬೀಳುವ ಹಂತದಲ್ಲಿರುವ ಮನೆಯ ದುರಸ್ತಿಗಾಗಿ ಸರ್ಕಾರಿ ಕಚೇರಿ ಅಲೆದಾಟ ನಡೆಸಿದರೂ ಸಫಲವಾಗದೇ ಇರುವ ಬೆನ್ನಲ್ಲೇ ಈ ಕುಟುಂಬದ ಕಷ್ಟವನ್ನರಿತ ಕೇರಳ ಮೂಲದ ಸಂಸ್ಥೆಯೊಂದು ಇವರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದರೂ, ಈ ಕುಟುಂಬಕ್ಕೆ ಹಸ್ತಾಂತರಿಸಲು ನಿರಾಕರಿಸಿ ಸತಾಯಿಸುತ್ತಿದೆ ಎಂದು ಆರೋಪ ವ್ಯಕ್ತವಾಗಿದೆ.

ಈ ವಿಷಯ ತಿಳಿದ ಪುತ್ತೂರು ನಗರಸಭೆ, ಹಿಂದೂ ಸಂಘಟನೆ ಮತ್ತು ಕ್ಯಾಂಪ್ಕೋ ಇನ್ ಸೇವಾ ಪ್ರತೀಕ್ಷಾ ಅವರ ಮನೆಗೆ ತೆರಳಿ ಸೂರಿನ ಭರವಸೆ ನೀಡಿದೆ.


ಪ್ರಸ್ತುತ ಪ್ರಕಾಶ್ ಪೂಜಾರಿ ಇರುವ ಜೋಪಡಿ ಮನೆ ಕುಸಿಯುವ ಹಂತಕ್ಕೆ ತಲುಪಿದೆ. ಸರ್ಕಾರಿ ಜಮೀನಿನಲ್ಲಿ ಕಳೆದ 25 ವರ್ಷಗಳಿಂದ ವಾಸಿಸುತ್ತಿದ್ದ ಪ್ರಕಾಶ್ ಪೂಜಾರಿ ಹಾಗೂ ತಾಯಿ ಮೀನಾಕ್ಷಿ ಹೆಸರಿನಲ್ಲಿ 2018 ರಲ್ಲಿ 94 ಸಿಸಿ ಯೋಜನೆಯಡಿ 2.5 ಸೆಂಟ್ಸ್ ನಿವೇಶನ ನೀಡಲಾಗಿದೆ. ಆದರೆ ಈ ಹಳೇ ಮನೆ ಕಳೆದ ಮಳೆಗಾಲಕ್ಕೆ ಸಂಪೂರ್ಣ ಕುಸಿದಿದ್ದು, ಅಸುರಕ್ಷಿತ ಮನೆಯಲ್ಲೇ ಈ ಕುಟುಂಬ ವಾಸಿಸುತ್ತಿದೆ.


ಕೆಮ್ಮಿಂಜೆ ಷಣ್ಮುಖ ಸುಬ್ರಮಣ್ಯ ದೇವಸ್ಥಾನದ ಕಮಿಟಿಯ ಮುಂದಾಳತ್ವದಲ್ಲಿ ಗುರುಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ, ನಿರ್ಮಾಣವಾಗುತ್ತಿರುವ ಈ ಮನೆಗೆ ಕ್ಯಾಂಪ್ಕೋ ಇನ್ ಸೇವಾ ವತಿಯಿಂದ ರೂಪಾಯಿ 1,18000 ಮೊತ್ತದ ಚೆಕ್ ಅನ್ನು ಪ್ರಕಾಶ್ ಪೂಜಾರಿ ಮತ್ತು ಮೀನಾಕ್ಷಿ ದಂಪತಿಗಳ ಸಮ್ಮುಖದಲ್ಲಿ ಗುರುಕೃಷ್ಣ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಸತೀಶ್ ಬಿ. ಸ್ ಇವರಿಗೆ ಕ್ಯಾಂಪ್ಕೋ ಇನ್ ಸೇವಾದ ಕೇಂದ್ರ ಸಂಯೋಜಕರು ಹಾಗೂ ಕ್ಯಾಂಪ್ಕೋ ಉಪಾಧ್ಯಕ್ಷರೂ ಆದ ಶಂ.ನಾ.ಖಂಡಿಗೆಯವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೋ ಇನ್ ಸೇವಾ ಪುತ್ತೂರು ವಲಯ ಸಂಯೋಜಕರಾದ ರಮೇಶ ನೆಗಳಗುಳಿ, ಸದಸ್ಯರಾದ ಪ್ರಶಾಂತ್ ಭಟ್, ಪ್ರಜೀತ್ ಕುಮಾರ್,ಬಜರಂಗದಳ ಪುತ್ತೂರು ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜಿತೇಶ್ ಬಲ್ನಾಡ್ ಉಪಸ್ಥಿತರಿದ್ದರು.

- Advertisement -

Related news

error: Content is protected !!